ಮಂಗಳೂರು: ಆನ್ಲೈನ್ ಗೇಮ್ ಗೀಳಿಗೆ ಬಿದ್ದು ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಮೂಡುಶೆಡ್ಡೆ ನಿವಾಸಿ ಸೂರ್ಯ ಶೆಟ್ಟಿ(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್ಲೈನ್ ನಲ್ಲಿ ಹಣ ಹೂಡಿಕೆ ಮಾಡಿ ಆಟವಾಡುತ್ತಿದ್ದ ಸೂರ್ಯಶೆಟ್ಟಿ ಬುಧವಾರ ತನ್ನ ಸ್ನೇಹಿತನಿಂದ 83,000ರೂ. ಸಾಲ ಪಡೆದುಕೊಂಡಿದ್ದು, ಆನ್ಲೈನ್ ಗೇಮ್ ನಲ್ಲಿ ಹೂಡಿಕೆ ಮಾಡಿ ಆಟವಾಡಿ ಹಣ ಕಳೆದುಕೊಂಡಿದ್ದಾನೆ. ಇದರಿಂದ ಚಿಂತೆಗೊಳಗಾದ ಸೂರ್ಯಶೆಟ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮರವೂರು ಸಮೀಪದ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇರಿ ಹಿಲ್ ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸೂರ್ಯ ಶೆಟ್ಟಿ ಕೆಲವು ದಿನಗಳ ಹಿಂದೆ ಉದ್ಯೋಗ ಬಿಟ್ಟು ಬೇರೆ ಕೆಲಸ ಹುಡುಕುತ್ತಿದ್ದ. ಪ್ರತಿಭಾನ್ವಿತನಾಗಿದ್ದ ಸೂರ್ಯ ಶೆಟ್ಟಿ ಬಿಎಸ್ಸಿ ಪದವೀಧರನಾಗಿದ್ದು, ಆನ್ಲೈನ್ ಗೇಮ್ ಗೀಳಿಗೆ ಬಲಿಯಾಗಿದ್ದಾನೆ.