ಧಾರವಾಡ: ಆನ್ ಲೈನ್ ಗೇಮ್ ಯುವಜನತೆಯನ್ನೇ ಬಲಿ ಪಡೆಯುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆನ್ ಲೈನ್ ಗೇಮ್ ಹಿಂದೆ ಬಿದ್ದ ಸ್ಟಾಫ್ ನರ್ಸ್ ಓರ್ವ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದಿದೆ.
ನಾಗರಾಜ್ ಶಿವಪ್ಪ ಉಳವಣ್ಣವರ್ (30) ಮೃತ ದುರ್ದೈವಿ. ಐಐಟಿ ಸ್ಟಾಫ್ ನರ್ಸ್ ಆಗಿದ್ದ ನಾಗರಾಜ್, ಆನ್ ಲೈನ್ ಗೇಮ್ ಆಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಆನ್ ಲೈನ್ ಗೇಮ್ ನಿಂದ 20 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದರು.
ತೀವ್ರ ನಷ್ಟದಿಂದ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.