ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹಬ್ಬಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ಹೆಚ್ಚಿನ ಕಮೆಂಟ್ಸ್ ಗಳಿಸಬೇಕೆಂಬ ಹಪಾಹಪಿಯಲ್ಲಿ ಎಂತಹ ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಇದರ ಪರಿಣಾಮ ಕೆಲವೊಬ್ಬರು ಜೀವವನ್ನೇ ಕಳೆದುಕೊಂಡ ಘಟನೆಗಳೂ ನಡೆದಿದೆ. ಇಷ್ಟಾದರೂ ರೀಲ್ಸ್ ಹುಚ್ಚು ಹೋಗುತ್ತಿಲ್ಲ.
ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರೀಲ್ ಚಿತ್ರೀಕರಣದ ವೇಳೆ ಯುವತಿಯೊಬ್ಬರು ಮೆಟ್ಟಿಲುಗಳಿಂದ ಕೆಳಗೆ ಉರುಳುತ್ತಿರುವ ವಿಡಿಯೋ ವ್ಯಾಪಕ ಟೀಕೆಗೆ ಗುರಿಯಾಗಿದೆ. ದಿನಾಂಕವಿಲ್ಲದ ಕ್ಲಿಪ್ ನಲ್ಲಿ ಯುವತಿ ತನ್ನ ಅನುಯಾಯಿಗಳಿಗೆ ವಿಷಯವನ್ನು ರಚಿಸುವ ಪ್ರಯತ್ನದಲ್ಲಿ ಉದ್ದೇಶಪೂರ್ವಕವಾಗಿ ಮೆಟ್ಟಿಲುಗಳಿಂದ ಕೆಳಗೆ ಉರುಳುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.
ಕೆಲವು ಬಳಕೆದಾರರು ಈ ಕೃತ್ಯವನ್ನು ತಮಾಷೆಯಾಗಿ ಕಂಡರೆ, ಹೆಚ್ಚಿನವರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯದಿಂದ ಸ್ವತಃ ಆಪಾಯ ಮಾಡಿಕೊಳ್ಳುವುದಲ್ಲದೇ ಸಾರ್ವಜನಿಕರಿಗೂ ಗಾಬರಿ ಹುಟ್ಟಿಸುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಇಂತಹ ನಡವಳಿಕೆಯು ಸಂಭಾವ್ಯ ಅಪಾಯ ಮತ್ತು ಸಾಮಾಜಿಕ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಖ್ಯಾತಿಗಾಗಿ ಜನರು ಯಾವ ಮಟ್ಟಕ್ಕೆ ಹೋಗುತ್ತಾರೆ ಎಂಬುದರ ಬಗ್ಗೆ ಚರ್ಚೆಯನ್ನು ಈ ವಿಡಿಯೋ ಹುಟ್ಟುಹಾಕಿದೆ. ಇಂತಹ ಅಜಾಗರೂಕ ಕ್ರಮಗಳು ಭಾಗಿಯಾಗಿರುವ ವ್ಯಕ್ತಿಗಳಿಗೆ ಅಪಾಯವನ್ನುಂಟು ಮಾಡುವುದಲ್ಲದೆ, ಸಹಾಯದ ಅಗತ್ಯವಿರುವ ನೈಜ ಸಂದರ್ಭಗಳಲ್ಲಿ ನಂಬಿಕೆಯನ್ನು ನಾಶಪಡಿಸುತ್ತವೆ ಎಂದು ವಿಮರ್ಶಕರು ವಾದಿಸಿದ್ದಾರೆ.
ऐसी हरकतों को देखकर अन्य लोगों से भी उनका विश्वास उठ जाता है !!
ऐसे लोगों की हरकत की वजह से ही जिनको वास्तव में मदद की जरूरत होती है उनकी लोग फिर मदद नहीं कर पाते हैं !!#viralvideo #Trendingvideo pic.twitter.com/4KzO0VgvEA
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 17, 2024