ಕೊಪ್ಪಳ: 2020-21 ಸಾಲಿನ ಅಂತರ ಘಟಕ, ವಿಭಾಗ ಹೊರಗಿನ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವರ್ಗಾವಣೆಯು ಜೂಮ್ ಸಭೆ(ಆನ್ಲೈನ್) ವರ್ಚುವಲ್ ನ ಗಣಕಿಕೃತ ಕೌನ್ಸೆಲಿಂಗ್ ಫೆಬ್ರವರಿ 3 ರಂದು ಅಪರಾಹ್ನ 12 ಗಂಟೆಗೆ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಅಂತಿಮ ಆದ್ಯತಾ ಕೌನ್ಸೆಲಿಂಗ್ ಪಟ್ಟಿಯಲ್ಲಿರುವ ಕೊಪ್ಪಳ ಜಿಲ್ಲೆಯ ಶಿಕ್ಷಕರು ಪರಸ್ಪರ ವರ್ಗಾವಣಾ ಮೂಲ ಅರ್ಜಿ ಹಾಗೂ ಆದ್ಯತೆಯ ಮೂಲ ದಾಖಲೆಗಳೊಂದಿಗೆ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಇಬ್ಬರು ಶಿಕ್ಷಕರು ಯಾವ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಸುತ್ತಿರುವರೋ ಆಯಾ ಜಿಲ್ಲೆಯ ವರ್ಚುವಲ್(ಆನ್ಲೈನ್) ಕೌನ್ಸೆಲಿಂಗ್ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಇಬ್ಬರು ಶಿಕ್ಷಕರು ಏಕಕಾಲದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಹಾಜರಾಗಿ ವರ್ಗವಣಾ ಕೌನ್ಸೆಲಿಂಗ್ ತಂತ್ರಾಂಶದಲ್ಲಿ ಒಪ್ಪಿಗೆ ಸೂಚಿಸಿದಲ್ಲಿ ಮಾತ್ರ ವರ್ಗವಣಾ ಆದೇಶ ಜಾರಿಗೊಳಿಸಲಾಗುವದು. ಇಬ್ಬರು ಶಿಕ್ಷಕರಲ್ಲಿ ಒಬ್ಬರು ಯಾರಾದರು ಗೈರು ಹಾಜರಾದಲ್ಲಿ ಅಂತಹ ಪ್ರಕರಣವನ್ನು ಗೈರು ಹಾಜರಿ ಪ್ರಕರಣ ಎಂದು ಪರಿಗಣಿಸಲಾಗುವದು. ನಂತರ ಯಾವುದೇ ಅಹವಾಲು ಅಸ್ಪದವಿರುವದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.