ನವದೆಹಲಿ: ಸ್ನಾತಕೋತ್ತರ ಮೆಡಿಕಲ್ ಪದವಿ ಕೋರ್ಸ್ ಪ್ರವೇಶಕ್ಕೆ ಆನ್ಲೈನ್ ಕೌನ್ಸೆಲಿಂಗ್ ಕಡ್ಡಾಯಗೊಳಿಸಲಾಗಿದೆ.
ಆನ್ಲೈನ್ ಕೌನ್ಸೆಲಿಂಗ್ ಮೂಲಕ ಮಾತ್ರ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶ ನಡೆಯಬೇಕಿದೆ. ಯಾವುದೇ ಕಾಲೇಜುಗಳು ನೇರವಾಗಿ ದಾಖಲಾತಿ ಮಾಡಿಕೊಳ್ಳುವಂತಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ತಿಳಿಸಿದೆ. ಮುಂಚಿತವಾಗಿಯೇ ಕಾಲೇಜ್ ಗಳು ಪ್ರತಿ ಕೋರ್ಸ್ ಶುಲ್ಕ ಪ್ರಕಟಿಸಬೇಕು ಎಂದು ಹೇಳಲಾಗಿದೆ.
ವೈದ್ಯಕೀಯ ಶಿಕ್ಷಣ ನಿಯಂತ್ರಕ ಸಂಸ್ಥೆ -ರಾಷ್ಟ್ರೀಯ ವೈದ್ಯಕೀಯ ಆಯೋಗ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಾವಳಿಗಳು -2023ರ ಪ್ರಕಾರ, ಆಯಾ ಪರೀಕ್ಷೆಗಳ ಮೆರಿಟ್ ಪಟ್ಟಿ ಆಧರಸಿ ಎಲ್ಲಾ ಪಿಜಿ ಸೀಟುಗಳಿಗೆ ಎಲ್ಲಾ ಸುತ್ತಿನ ಸಾಮಾನ್ಯ ಕೌನ್ಸೆಲಿಂಗ್ ಅನ್ನು ಆನ್ಲೈನ್ ವಿಧಾನದಲ್ಲಿ ರಾಜ್ಯ ಅಥವಾ ಕೇಂದ್ರೀಯ ಕೌನ್ಸೆಲಿಂಗ್ ಪ್ರಾಧಿಕಾರಗಳು ನಡೆಸಲಿದೆ ಎಂದು ಹೇಳಲಾಗಿದೆ.