ಮಂಗಳೂರು ಸೇನಾ ನೇಮಕಾತಿ ಕೇಂದ್ರ ವತಿಯಿಂದ ಅಗ್ನಿವೀರ ನೇಮಕಾತಿಗೆ ಆನ್ ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಏ.22 ರಿಂದ ಪ್ರಾರಂಭವಾಗಲಿದೆ.
ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೇನೆಯಲ್ಲಿ ಜನರಲ್, ಡ್ಯೂಟಿ, ಟೆಕ್ನಿಷಿಯನ್, ಟ್ರೇಡ್ಸ್‍ಮನ್, ಕಚೇರಿ ಸಹಾಯಕ, ಸ್ಟೋರ್ ಕೀಪರ್ ಮತ್ತಿತರ ಹುದ್ದೆಗಳಿಗೆ ಆನ್ ಲೈನ್ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳ ವಯೋಮಿತಿ ಶೈಕ್ಷಣಿಕ ಅರ್ಹತೆ ಮತ್ತಿತರ ಮಾಹಿತಿಗಳನ್ನು ಅರ್ಮಿ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು(joinindianarmy.nic.in) ವೆಬ್‍ಸೈಟ್‍ನಲ್ಲಿ ಮಾರ್ಚ್ 22ರೊಳಗೆ ಹೆಸರು ನೋಂದಣಿ ಮಾಡಬೇಕು. ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳ ಇ-ಮೇಲ್‍ಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.