
ಮಂಡ್ಯ: ಮಗಳ ಆನ್ಲೈನ್ ಶಿಕ್ಷಣದಿಂದ ಅಪ್ಪನ ಮುಖವಾಡ ಕಳಚಿ ಬಿದ್ದಿದೆ. ತಂದೆಯ ರಾಸಲೀಲೆ ವಿಡಿಯೋವನ್ನು ಮಗಳು ಅಮ್ಮನಿಗೆ ತೋರಿಸಿದ ಘಟನೆ ಬಿಂಡಿಗನವಿಲೆ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಮಗಳ ಆನ್ಲೈನ್ ಶಿಕ್ಷಣಕ್ಕೆ ತನ್ನ ಮೊಬೈಲ್ ಅನ್ನು ಅಪ್ಪ ಕೊಟ್ಟಿದ್ದಾನೆ. ಈ ವೇಳೆ ತಂದೆಯ ರಾಸಲೀಲೆ ವಿಡಿಯೋವನ್ನು ಮಗಳು ನೋಡಿ ಆ ವಿಡಿಯೋಗಳನ್ನು ತನ್ನ ಅಮ್ಮನಿಗೆ ತೋರಿಸಿದ್ದಾಳೆ. ಪತಿ ವಿಡಿಯೋ ನೋಡಿದ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು, ನಾಗಮಂಗಲ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.