
ಬೆಂಗಳೂರು: ಈಗಾಗಲೇ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿರುವ ಆನ್ಲೈನ್ ಪೇಮೆಂಟ್ ಆ್ಯಪ್ ಮೂಲಕ ಬಿಎಂಟಿಸಿ ಬಸ್ ಪ್ರಯಾಣದರ ಪಡೆಯುವ ವ್ಯವಸ್ಥೆಯನ್ನು ಎಲ್ಲಾ ಬಸ್ ಗಳಿಗೂ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇದಕ್ಕಾಗಿ ಬಿಎಂಟಿಸಿ ಬಸ್ ನಿರ್ವಾಹಕರಿಗೆ ತರಬೇತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಬಹುತೇಕ ಬಿಎಂಟಿಸಿ ಬಸ್ ಪ್ರಯಾಣಿಕರು ಪ್ರಯಾಣ ದರವನ್ನು ನಗದು ರೂಪದಲ್ಲಿ ಪಡೆಯಲಾಗುತ್ತಿದೆ. ಕೆಲವು ಬಸ್ ಗಳಲ್ಲಿ ಮಾತ್ರ ಆನ್ಲೈನ್ ಪೇಮೆಂಟ್ ಮೂಲಕ ಪ್ರಯಾಣ ದರ ಪಡೆಯಲಾಗುತ್ತಿದ್ದು, ಎಲ್ಲಾ ಬಿಎಂಟಿಸಿ ಬಸ್ ಗಳಲ್ಲಿ ಆನ್ಲೈನ್ ಮೂಲಕ ಪ್ರಯಾಣ ದರ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗುವುದು. ಎಲ್ಲಾ ವಾಹನಗಳಲ್ಲಿಯೂ ನಿಗಮದ ಖಾತೆಗೆ ಹಣ ವರ್ಗಾವಣೆಯಾಗುವಂತೆ ಯುಪಿಐ ಕೋಡ್ ಗಳನ್ನು ಅಳವಡಿಸಲಾಗುವುದು ಎಂದು ಹೇಳಲಾಗಿದೆ.