ಬೆಂಗಳೂರು: ಗ್ರಾಮ ಪಂಚಾಯತಿ ಸಿಬ್ಬಂದಿಗೆ ಆನ್ಲೈನ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಹಾಜರಾತಿ ಆಧರಿಸಿ ವೇತನ ಪಾವತಿಸಲಾಗುವುದು.
ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆ ಸುಗಮಗೊಳಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪಂಚತಂತ್ರ 2.0 ತಂತ್ರಾಂಶ ಅನುಷ್ಠಾನಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಪ್ರತಿದಿನ ತಮ್ಮ ಹಾಜರಾತಿನ ನಮೂದಿಸಲು ಈ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಗ್ರಾಮ ಪಂಚಾಯತಿ ಸಿಬ್ಬಂದಿ ಮಾಸಿಕ ವೇತನವನ್ನು ಇದೇ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಪಾವತಿಸಲಾಗುವುದು. ಅನೇಕರು ತಮ್ಮ ಹಾಜರಾತಿಯನ್ನು ನಿಯಮತವಾಗಿ ದಾಖಲಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಇನ್ನು ಇ- ಹಾಜರಾತಿ ಮಾಡ್ಯೂಲ್ ನಲ್ಲಿ ದಾಖಲಾದ ಹಾಜರಾತಿ ಆಧರಿಸಿ ಸಿಬ್ಬಂದಿ ವೇತನ ಪಾವತಿಸಲಾಗುವುದು. ಕಡ್ಡಾಯವಾಗಿ ಪಂಚತಂತ್ರ ತಂತ್ರಾಂಶ ಮತ್ತು ಮೊಬೈಲ್ ಆಪ್ ಮೂಲಕ ಗ್ರಾಮ ಪಂಚಾಯತಿ ಸಿಬ್ಬಂದಿ ದೈನಂದಿನ ಹಾಜರಾತಿಯನ್ನು ತಪ್ಪದೇ ಅಳವಡಿಸಲು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ತಿಳಿಸಿದ್ದಾರೆ.