ಶಿವಮೊಗ್ಗ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶಿವಮೊಗ್ಗದ ವಿವಿಧ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ(ಪಿಯುಸಿ ಮತ್ತು ಪಿಯುಸಿ ಸಮಾನಂತರ ಕೋರ್ಸ್) ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶ https://shp.karnataka.gov.in ರ ಮೂಲಕ ಜುಲೈ 15 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಪವಿಭಾಗ, 2ನೇ ಮಹಡಿ, ಹಳೆ ಡಿ.ಸಿ.ಕಚೇರಿ, ಶಿವಮೊಗ್ಗ, ದೂ.ಸಂ.: 08182-220206, ಶಿವಮೊಗ್ಗ ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿ, 7795315517, ವಿಸ್ತರಣಾಧಿಕಾರಿಗಳು, ಸಾಗರ-9900132234, ಜಿಲ್ಲಾ ಮಾಹಿತಿಕೇಂದ್ರ, ಶಿವಮೊಗ್ಗ-7676888388, ತಾ. ಮಾ.ಕೇ, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಶಿಕಾರಿಪುರ-7829136724, ಸಾಗರ-7338222907, ಸೊರಬ-9513815513, ಹೊಸನಗರ-9008447029 ಗಳನ್ನು ಸಂಪರ್ಕಿಸುವುದು.