ದಿನಸಿ ತರಕಾರಿ, ಬಟ್ಟೆಗಳಿಂದ ಹಿಡಿದು ಔಷಧಗಳನ್ನು ಕೂಡ ಈಗ ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಟ್ರೆಂಡ್ ಜೋರಾಗಿದೆ. ಬೇರೆಲ್ಲಾ ವಸ್ತುಗಳು ಹಾಗಿರಲಿ, ಆನ್‌ಲೈನ್‌ನಲ್ಲಿ ಔಷಧಗಳನ್ನು ಕೊಂಡುಕೊಳ್ಳುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ನೀವು ಮಾಡುವ ಚಿಕ್ಕ ಪುಟ್ಟ ಮಿಸ್ಟೇಕ್‌ಗಳಿಂದಾಗಿ ತಪ್ಪಾದ ಔಷಧ ತರಿಸುವ ಸಾಧ್ಯತೆ ಇರುತ್ತದೆ.
ಭರವಸೆಯ ವೆಬ್‌ಸೈಟ್ ಆಯ್ಕೆ ಮಾಡಿಕೊಳ್ಳಿ : ಮೊದಲನೆಯದಾಗಿ ಆನ್‌ಲೈನ್‌ನಲ್ಲಿ ಔಷಧಿಯನ್ನು ಖರೀದಿಸುವಾಗ ನೀವು ವಿಶ್ವಾಸಾರ್ಹ ವೆಬ್‌ಸೈಟ್ ಅನ್ನು ಆರಿಸಿಕೊಳ್ಳಬೇಕು. ಹೀಗೆ ಮಾಡಿದರೆ ನಕಲಿ ಔಷಧ ಖರೀದಿಯನ್ನು ತಪ್ಪಿಸಬಹುದು.
ಔಷಧಿಗಳನ್ನು ಆರ್ಡರ್ ಮಾಡುವ ಮುನ್ನ ಕಸ್ಟಮರ್ ಕೇರ್ ಜೊತೆ ಮಾತಾಡಿ : ಆನ್‌ಲೈನ್‌ನಲ್ಲಿ ಔಷಧಿಯನ್ನು ಆರ್ಡರ್ ಮಾಡುವ ಮೊದಲು ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾತನಾಡಿ. ನಿಮಗೆ ಬೇಕಾದ ಮಾಹಿತಿಗಳನ್ನು ಮೊದಲೇ ತೆಗೆದುಕೊಳ್ಳಿ.
ಔಷಧ ಸೇವನೆಗೂ ಮುನ್ನ ವೈದ್ಯರನ್ನು ಸಂಪರ್ಕಿಸಿ : ಆನ್‌ಲೈನ್‌ನಲ್ಲಿ ಔಷಧಿಯನ್ನು ಆರ್ಡರ್ ಮಾಡಿ ತರಿಸಿಕೊಂಡು ನಿಮ್ಮಷ್ಟಕ್ಕೆ ನೀವೇ ಸೇವನೆ ಮಾಡಬೇಡಿ. ಔಷಧ ಸೇವಿಸುವ ಮುನ್ನ ಅದು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ವೈದ್ಯರಿಂದ ಪರಿಶೀಲಿಸಿಕೊಳ್ಳಿ.
ಬಿಲ್ ಪಡೆಯಿರಿ : ಡೆಲಿವರಿ ಬಾಯ್ ಬಳಿಯಿಂದ ಔಷಧಿ ತೆಗೆದುಕೊಳ್ಳುವಾಗ ಮರೆಯದೇ ಬಿಲ್ ತೆಗೆದುಕೊಳ್ಳಿ. ಅದರಲ್ಲಿ ನೀವು ಆರ್ಡರ್ ಮಾಡಿದ ಔಷಧಿಗಳ ಬಗ್ಗೆ ಎಲ್ಲಾ ವಿವರಗಳಿರುತ್ತವೆ. ಯಾವುದೇ ಸಮಸ್ಯೆಗಳಾದಲ್ಲಿ ಕಂಪನಿ ವಿರುದ್ಧ ದೂರು ಕೊಡಲು ಬಿಲ್‌ನಿಂದ ಸಹಾಯವಾಗುತ್ತದೆ.