ಹಂತ 1: ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಅನ್ನು ಬಳಸಿ ನಿಮ್ಮ ಇಪಿಎಫ್ ಖಾತೆಗೆ ಲಾಗಿನ್ ಆಗಿ.
ಹಂತ 2: ಈಗ, ಆನ್ಲೈನ್ ಸೇವೆಗಳ ಆಯ್ಕೆಗಳಿಗೆ ಹೋಗಿ.
ಹಂತ 3: `ಒನ್ ಮೆಂಬರ್- ಒನ್ ಇಪಿಎಫ್ ಅಕೌಂಟ್(ವರ್ಗಾವಣೆ ಮನವಿ)’ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಮುಂದೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಿ ಮತ್ತು ಪಿಎಫ್ ಅಕೌಂಟ್ ವಿವರಗಳನ್ನು ನೀಡಿ.
ಹಂತ 5: ನಿಮ್ಮ ಪಿಎಫ್ ಅಕೌಂಟ್ ವಿವರಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಹಿಂದಿನ ಉದ್ಯೋಗದಲ್ಲಿನ ಪಿಎಫ್ ಅಕೌಂಟ್ ವಿವರಗಳನ್ನು ನೋಡಲು ಗೆಟ್ ಡೀಟೈಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6: ಮುಂದೆ, ಕ್ಲೇಮ್ ಅರ್ಜಿಯನ್ನು ಭರ್ತಿ ಮಾಡಲು ನಿಮ್ಮ ಹಿಂದಿನ ಉದ್ಯೋಗದಾತ ಅಥವಾ ಈಗಿನ ಉದ್ಯೋಗದಾತರ ಆಯ್ಕೆಯನ್ನು ಆಯ್ಕೆ ಮಾಡಿ.
ಹಂತ 7: ಉದ್ಯೋಗದಾತರಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಐಡಿ ಅಥವಾ ಯುಎಎನ್ ಅನ್ನು ಟೈಪ್ ಮಾಡಿ.
ಹಂತ 8: ನಿಮ್ಮ ನೋಂದಾಯಿತ ಮೊಬೈಲ್ ಗೆ ಒಟಿಪಿಯನ್ನು ಪಡೆಯಲು ಒಟಿಪಿ ಆಪ್ಶನ್ ಅನ್ನು ಕ್ಲಿಕ್ ಮಾಡಿ.
ಹಂತ 9: ನಿಮ್ಮ ಮೊಬೈಲ್ ಗೆ ಬಂದ ಒಟಿಪಿ ಸಂಖ್ಯೆಯನ್ನು ಎಂಟರ್ ಮಾಡಿ ಮತ್ತು ಸಬ್ ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಒಟಿಪಿಯೊಂದಿಗೆ ನೀವು ಮೆಸೇಜ್ ಅನ್ನು ಪಡೆಯುತ್ತೀರಿ.
ಹಂತ 10: ಈಗ, ನೀವು ಸೆಲ್ಫ್-ಅಟೆಸ್ಟ್ ಮಾಡಿದ ಪಿಎಫ್ ವರ್ಗಾವಣೆ ಮನವಿ ಅರ್ಜಿಯನ್ನು ಪಡೆಯುತ್ತೀರಿ. ಈ ಇಪಿಎಫ್ ವರ್ಗಾವಣೆಯ ಬಗ್ಗೆ ನಿಮ್ಮ ಉದ್ಯೋಗದಾತರಿಗೂ ಸಹ ಮೆಸೇಜ್ ಹೋಗಿರುತ್ತದೆ.