ಹೌರಾದ ಅರಿಜಿತ್ ಭಟ್ಟಾಚಾರ್ಯ ಮೆಕ್ಸಿಕೋದ ಲೆಸ್ಲಿ ಡೆಲ್ಗಾಡೊ ಜೊತೆಗೆ ಆನ್‌ಲೈನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ, ಜೀವನದ ಜೊತೆಗಾರರಾಗುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲವೇನೋ?
ಭೌಗೋಳಿಕ ಮತ್ತು ಸಾಂಸ್ಕೃತಿಕ ಅಡೆತಡೆದಾಟಿ ಲೆಸ್ಲಿ ಭಾರತಕ್ಕೆ ಬಂದ ನಂತರ ಇಬ್ಬರೂ ಜೂನ್ 19 ರಂದು ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ.
ಲಾಕ್‌ಡೌನ್‌ಗಳು ಅವರ ಪ್ರೇಮಕಥೆಯಲ್ಲಿ ಅನಿಶ್ಚಿತತೆಯನ್ನು ತಂದಿದ್ದವು ಮತ್ತು ಇಬ್ಬರೂ ಭೇಟಿಯಾಗಬಹುದೇ ಎಂದು ಯೋಚಿಸಿದ್ದರು. ಈ ಕಥೆಯ ಉತ್ತಮ ಭಾಗವೆಂದರೆ ಎರಡೂ ಕುಟುಂಬಗಳು ತಮ್ಮ ಮಕ್ಕಳ ಆಯ್ಕೆಯನ್ನು ಪೂರ್ಣ ಹೃದಯದಿಂದ ಒಪ್ಪಿಕೊಂಡಿವೆ. ಜುಲೈ 5 ರಂದು ಈ ಜೋಡಿ ಎಲ್ಲರ ಸಮ್ಮುಖದಲ್ಲಿ ವಿವಾಹವಾಗುತ್ತಿವೆ.
ಹೌರಾದ ಬಲ್ಲಿಯ ದುರ್ಗಾಪುರ ಸಾಹೇಬಗನ್ ಪ್ರದೇಶದ ನಿವಾಸಿ ಅರಿಜಿತ್ ಕೋವಿಡ್ 19 ಸಮಯದಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ದೀರ್ಘಕಾಲ ಇಂಟರ್ನೆಟ್‌ನಲ್ಲಿ ಸಮಯ ಕಳೆಯುತ್ತಿದ್ದರು.
ಈ ವೇಳೆ ಅವರಿಬ್ಬರ ಸಂಭಾಷಣೆಯು ಆಳವಾದ ಮಾತುಕತೆಗೆ ತಿರುಗಿದೆ. ಅಂತರಾಷ್ಟ್ರೀಯ ವಿಮಾನಗಳ ರದ್ದತಿಯಿಂದಾಗಿ ಅರಿಜಿತ್ ಅವರನ್ನು ಭೇಟಿಯಾಗುವುದು ಲೆಸ್ಲಿಗೆ ಬಹುತೇಕ ಅಸಾಧ್ಯವಾಯಿತು. ನಿಷೇಧವನ್ನು ತೆಗೆದುಹಾಕಿದ ತಕ್ಷಣ ಲೆಸ್ಲಿ ಮೆಕ್ಸಿಕೋದಿಂದ ಹೌರಾಕ್ಕೆ ಹಾರಿದ್ದಾರೆ.
ನಾವು ಕುಟುಂಬದೊಂದಿಗೆ ಮಾತನಾಡಿದ ನಂತರ ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ಅರಿಜಿತ್ ಹೇಳಿದ್ದಾರೆ. ಅರಿಜಿತ್ ಮತ್ತು ಲೆಸ್ಲಿ ಅಕ್ಟೋಬರ್ ವರೆಗೂ ಹೌರಾದಲ್ಲಿ ಇರುತ್ತಾರೆ. ಅದರ ನಂತರ ಅವರು ಮೆಕ್ಸಿಕೋಗೆ ಹೋಗುತ್ತಾರೆ. ಅಲ್ಲಿ ಸಾಮಾಜಿಕ ಸಮಾರಂಭದಲ್ಲಿ ಮತ್ತೊಮ್ಮೆ ಮದುವೆಯಾಗಲಿದ್ದಾರೆ.