
ಚಳಿಗಾಲದಲ್ಲಿ ಸೇವಿಸಿ ಹೂಕೋಸಿನ ಖೀರ್
ಈರುಳ್ಳಿ ಲಾಟಿನ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಹೀಗೆ ಕಡಿಮೆ ಬೆಲೆ ನೀಡಲಾಗಿದೆ ಎಂದು ಕಮಿಷನ್ ಮಧ್ಯವರ್ತಿಯೊಬ್ಬ ಇದಕ್ಕೆ ವಿವರಣೆ ಕೊಟ್ಟಿದ್ದಾನೆ. ಸೋಲಾಪುರ ಮೂಲದ ಈ ಕಮಿಷನ್ ಏಜೆಂಟ್ ಕೊಟ್ಟ ಮಾರಾಟದ ರಸೀದಿಯಲ್ಲಿ; ರೈತ ಬಾಪು ಕವಾಡೆ 1,123 ಕೆಜಿ ಈರುಳ್ಳಿ ಕಳುಹಿಸಿದ್ದು, 1,665.50 ರೂ.ಗಳ ಸಂಪಾದನೆ ಮಾಡಿದ್ದಾರೆ. ಇದರಲ್ಲಿ ಕೂಲಿ, ತೂಕ ಮಾಡುವ ವೆಚ್ಚ, ಹೊಲದಿಂದ ಕಮಿಷನ್ ಏಜೆಂಟ್‌ನ ಅಂಗಡಿಗೆ ಸಾಗಾಟ ವೆಚ್ಚ ಎಂದು 1,651.98 ರೂ.ಗಳ ಕಡಿತವಾಗಿದೆ. ಒಟ್ಟಾರೆಯಾಗಿ ರೈತನಿಗೆ ಈರುಳ್ಳಿ ಮಾರಾಟದಿಂದ ಕೇವಲ 13 ರೂಪಾಯಿ ಕೈಗೆ ಸಿಕ್ಕಂತಾಗಿದೆ.
ನೀವೂ ಕುಳಿತಲ್ಲೇ ಕಾಲು ಅಲ್ಲಾಡಿಸುತ್ತೀರಾ…? ಎಚ್ಚರ…!
ಕವಾಡೆರ ಮಾರಾಟದ ರಸೀದಿಯ ಚಿತ್ರ ಟ್ವೀಟ್ ಮಾಡಿದ ಮಾಜಿ ಸಂಸದ ಹಾಗೂ ಸ್ವಾಭಿಮಾನಿ ಶೆಟ್ಕಾರೀ ಸಂಘಟನೆ ನಾಯಕ ಎಂಪಿ ರಾಜು ಶೆಟ್ಟಿ, “ಬರೀ 13 ರೂಪಾಯಿ ಇಟ್ಟುಕೊಂಡು ಒಬ್ಬರು ಏನು ಮಾಡಬಹುದು? ಇದು ಅಕ್ಷಮ್ಯ. ಏಜೆಂಟ್ ಅಂಗಡಿಗೆ ರೈತ ತನ್ನ ಹೊಲದಿಂದ 24 ಮೂಟೆ ಈರುಳ್ಳಿ ಸಾಗಾಟ ಮಾಡಿದ್ದಾರೆ. ಮತ್ತು ಆತನಿಗೆ ಅದರಿಂದ ಬರೀ 13 ರೂಪಾಯಿ ಸಿಕ್ಕಿದೆ. ನಾಟಿ ಮಾಡಲು ಮಣ್ಣನ್ನು ಹದಗೊಳಿಸಿ, ಈರುಳ್ಳಿ ಬೀಜ ಖರೀದಿಸಿ, ರಸಗೊಬ್ಬರ ಹಾಗೂ ಕಟಾವಿನ ವೆಚ್ಚಗಳೆಲ್ಲಾ ಸೇರಿದ ಉತ್ಪಾದನಾ ವೆಚ್ಚವನ್ನು ಆತ ಹೇಗೆ ಭರಿಸಿಯಾನು..? ಈರುಳ್ಳಿ ಬೆಲೆ ಆಗಸ ಮುಟ್ಟಿದರೆ ಕೇಂದ್ರ ಸರ್ಕಾರವು ಸಮರೋಪಾದಿಯಲ್ಲಿ ಬೇರೆ ದೇಶಗಳಿಂದ ರಫ್ತು ಮಾಡಿಕೊಳ್ಳುತ್ತದೆ. ಆದರೆ, ಈಗ ಬೆಲೆಗಳು ಕುಸಿದಿರುವಾಗ, ಸರ್ಕಾರವು ರೈತನ ಪಾಡನ್ನು ನಿರ್ಲಕ್ಷಿಸಿದೆ,” ಎಂದು ಆಪಾದಿಸಿದ್ದಾರೆ.
“ಸಾಗಾಟದ ವೆಚ್ಚ ಭರಿಸಲು ಸಾಲುವಷ್ಟು ದುಡ್ಡನ್ನು ಕಾವಡೆ ಸಂಪಾದಿಸಿದ್ದಾರೆ. ಇಲ್ಲವಾದಲ್ಲಿ ಆ ದುಡ್ಡನ್ನೂ ಅವರು ತಮ್ಮದೇ ಜೇಬಿನಿಂದ ಭರಿಸಬೇಕಿತ್ತು,” ಎಂದು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.