ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.
ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆ ನಿವಾರಿಸಿಕೊಳ್ಳಬಹುದು. ಹೇಗೆ ಅನ್ನೋದನ್ನು ನೋಡೋಣ.
* ಈರುಳ್ಳಿಯಲ್ಲಿರುವ ವಿಟಮಿನ್ ಸಿ, ಈ ಮತ್ತು ಎ ಸ್ಕಿನ್ ಗ್ಲೋ ಆಗಲು ಸಹಕರಿಸುತ್ತದೆ. ಅದಕ್ಕಾಗಿ ಎರಡು ಚಮಚ ಹೆಸರು ಬೇಳೆ ಹಿಟ್ಟು, ಅರ್ಧ ಚಮಚ ಈರುಳ್ಳಿ ರಸ ಮತ್ತು ಅರ್ಧ ಚಮಚ ಹಾಲು ಮಿಕ್ಸ್ ಮಾಡಿ ಮುಖ ಮತ್ತು ಕೈಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ನಂತರ ಹಾಲಿನಿಂದಲೇ ತೊಳೆದರೆ ಸ್ಕಿನ್ ಗ್ಲೋ ಆಗುತ್ತದೆ.
* ಈರುಳ್ಳಿ ರಸದಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಸುಕ್ಕು, ನೆರಿಗೆ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.
* ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಆಲಿವ್ ಆಯಿಲ್ ಬೆರೆಸಿ ಮುಖಕ್ಕೆ ಹಚ್ಚಿದರೆ ಪಿಂಪಲ್ ಸಮಸ್ಯೆ ನಿವಾರಣೆಯಾಗುತ್ತದೆ.
* ಯೋಗರ್ಟ್ ಜೊತೆ ಈರುಳ್ಳಿ ರಸ ಬೆರೆಸಿ, ಅದಕ್ಕೆ ಯಾವುದೇ ಎಸೆನ್ಷಿಯಲ್ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ವೃತ್ತಾಕಾರದಲ್ಲಿ ಮಸಾಜ್ ಮಾಡಿದರೆ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.
* ಮುಖದಲ್ಲಿ ಕಲೆ, ಮಚ್ಚೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಈರುಳ್ಳಿ ರಸ ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ಒಂದು ತಿಂಗಳಲ್ಲಿ ಮಚ್ಚೆ ಸಮಸ್ಯೆ ನಿವಾರಣೆಯಾಗುತ್ತದೆ.
* ರೆಗ್ಯುಲರ್ ಆಗಿ ಈರುಳ್ಳಿ ರಸವನ್ನು ತುಟಿಗೆ ಹಚ್ಚಿ ಮಸಾಜ್ ಮಾಡಿದರೆ ಡೆಡ್ ಸ್ಕಿನ್ ನಿವಾರಣೆಯಾಗಿ ತುಟಿ ಮೃದು ಮತ್ತು ಕೋಮಲವಾಗುತ್ತದೆ.
* ಕೂದಲು ತೆಳ್ಳಗಾಗುತ್ತಿದ್ದರೆ ಈರುಳ್ಳಿ ರಸ ಮತ್ತು ಜೇನು ಮಿಕ್ಸ್ ಮಾಡಿ ರಾತ್ರಿ ಕೂದಲಿಗೆ ಹಚ್ಚಿ ಹಾಗೆ ಬಿಡಿ. ಬೆಳಗ್ಗೆ ಎದ್ದು ಶ್ಯಾಂಪೂವಿನಿಂದ ವಾಷ್ ಮಾಡಿ. ಇದರಿಂದ ಕೂದಲು ದಪ್ಪಗಾಗುತ್ತದೆ.
* ತಲೆಹೊಟ್ಟಿನ ಸಮಸ್ಯೆ ಇದ್ದವರು ಈರುಳ್ಳಿ ರಸದೊಂದಿಗೆ ಒಣಗಿದ ನಿಂಬೆ ಸಿಪ್ಪೆ ಪುಡಿ ಮತ್ತು ಯೋಗರ್ಟ್ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ.
* ಕೂದಲು ಚೆನ್ನಾಗಿ ಬೆಳೆಯಲು ಈರುಳ್ಳಿ ರಸಕ್ಕೆ ಒಂದು ಚಮಚ ಮೆಂತೆ ಪುಡಿ ಸೇರಿಸಿ ಹಚ್ಚಿ. ಒಣಗಿದ ಮೇಲೆ ಚೆನ್ನಾಗಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.