ಈರುಳ್ಳಿಸೊಪ್ಪು (ಸ್ಪ್ರಿಂಗ್ ಆನಿಯನ್) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ. ಇದರ ಪ್ರಯೋಜನ ತಿಳಿದರೆ ಎಲ್ಲರೂ ಇದನ್ನು ಸೇವಿಸುತ್ತಾರೆ. ಹಾಗಾದ್ರೆ ಇದನ್ನು ಸೇವಿಸಿದರೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.
* ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ತೊಡೆದು ಹಾಕುತ್ತದೆ.
* ಇದರಲ್ಲಿ ಆ್ಯಂಟಿವೈರಲ್ ಗುಣಲಕ್ಷಣವಿದ್ದು, ಶೀತ, ಕೆಮ್ಮು, ಕಫ ಮತ್ತು ಜ್ವರದ ಸಮಸ್ಯೆಯ ವಿರುದ್ಧ ಹೋರಾಡುತ್ತದೆ. ದೇಹದಲ್ಲಿ ಲೋಳೆ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
* ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಹಾಗೂ ಮೂಳೆಗಳ ಸಮಸ್ಯೆಯನ್ನು ನಿವಾರಿಸುತ್ತದೆ.