ಬಾಗಲಕೋಟೆ: ಬಾಗಲಕೋಟೆ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ0 ಈರುಳ್ಳಿ ಬೆಳೆದ ರೈತರಿಗೆ ನಿರಾಸೆಯಾಗಿದೆ.
ಅಧಿಕ ಗುಣಮಟ್ಟ, ಉತ್ತಮ ಇಳುವರಿ, ಒಳ್ಳೆಯ ಬೆಲೆಯಿಂದ ಸಂತಸದಲ್ಲಿದ್ದ ಈರುಳ್ಳಿ ಬೆಳೆಗಾರರಿಗೆ ಈರುಳ್ಳಿ ದರ ದಿಢೀರನೆ ಕುಸಿತ ಕಂಡಿರುವುದು ನಿರಾಸೆ ತಂದಿದೆ. ಅಕ್ಟೋಬರ್ ಮಧ್ಯ ಭಾಗದವರೆಗೂ ಗುಣಮಟ್ಟದ ಈರುಳ್ಳಿ ಕನಿಷ್ಠ 500 ರಿಂದ ಗರಿಷ್ಠ 4 ಸಾವಿರ ರೂ.ವರೆಗೂ ಇತ್ತು. ಅಕ್ಟೋಬರ್ ನಲ್ಲಿ ನಿರಂತರ ಮಳೆಯಾದ ಪರಿಣಾಮ ಕೊಯ್ಲು ಮಾಡಿದ್ದ ಈರುಳ್ಳಿ ಸಂಪೂರ್ಣ ಹಾಳಾಗಿದೆ.
ಕಟಾವಾಗದೆ ಇದ್ದ ಈರುಳ್ಳಿ ಅಧಿಕ ತೇವಾಂಶದ ಕಾರಣ ಹಾನಿಯಾಗಿದೆ. ಇದರಿಂದಾಗಿ ಬೆಲೆ ಕುಸಿತವಾಗಿದೆ. ಗುಣಮಟ್ಟದ ಈರುಳ್ಳಿಗೆ 1,500 ರಿಂದ 2000 ರೂ. ಮಾತ್ರ ಸಿಗುತ್ತಿದೆ.
ವಿಜಯನಗರ ಜಿಲ್ಲೆ ಕೊಟ್ಟೂರಿನ ರೈತರೊಬ್ಬರು 150 ಪಾಕೆಟ್ ಈರುಳ್ಳಿಯನ್ನು ತಿಪ್ಪೆಗೆ ಎಸೆದಿದ್ದಾರೆ. ಮತ್ತೊಬ್ಬ ರೈತ 100 ಚೀಲ ಈರುಳ್ಳಿಯನ್ನು ಮಾರಾಟಕ್ಕೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದು, ವ್ಯಾಪಾರವಾಗದೇ ವಾಪಸ್ ತಂದಿದ್ದಾರೆ. ಈರುಳ್ಳಿ ದರ ದಿಢೀರ್ ಕುಸಿತವಾಗಿರುವುದು ರೈತರನ್ನು ಕಂಗಾಲಾಗಿಸಿದೆ.