ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್ (Oil and Natural Gas Corporation Limited-ONGC) ನಲ್ಲಿ ಖಾಲಿ ಇರುವ ಒಟ್ಟು 922 ನಾನ್ ಎಕ್ಸಿಕ್ಯೂಟಿವ್ (Non-Executive) ಹುದ್ದೆಗಳಿಗೆ ಅರ್ಜಿ ಅಹ್ವಾನಿನಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 28, 2022 ರವರೆಗೂ ಅವಕಾಶವಿದೆ. ಹೆಚ್ಚಿನ ಮಾಹಿತಿ ಇಲಾಖೆಯ ಅಧಿಕೃತ ವೆಬ್ ತಾಣವಾಗಿರೋ ongcindia.com ಭೇಟಿ ನೀಡಬಹುದಾಗಿದೆ.
ಖಾಲಿ ಇರುವ ವಿವಿಧ 922 ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ವಿದ್ಯಾರ್ಹತೆ ಪಡೆದಿರಬೇಕು. ಅಭ್ಯರ್ಥಿಗಳು ಸ್ಟೇಟ್ ಬೋರ್ಡ್ ಆಫ್ ಟೆಕ್ನಿಕಲ್ ಎಜ್ಯುಕೇಶನ್ (SBTE) / ನ್ಯಾಷನಲ್ ಕೌನ್ಸಿಲ್ ಫಾರ್ ವೋಕೇಶನಲ್ ಟ್ರೈನಿಂಗ್ (NCVT) ನಿಂದ ಅನುಮೋದಿಸಲಾದ ITI/ ತಾಂತ್ರಿಕ ಸಂಸ್ಥೆಯಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸು 19 ಆದ್ರೂ ಇನ್ನೂ ಪುಟ್ಟ ಬಾಲಕಿಯಂತೆ ಕಾಣುತ್ತಾಳೆ ಈ ಯುವತಿ..!
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಸಕ್ತರಾಗಿದ್ದಲ್ಲಿ ಅವರ ವಯೋಮಾನ 18 ರಿಂದ 24 ಒಳಗಿರಬೇಕು. SC/ST, OBC-NC/Ex-Servicemen/PwBD ವರ್ಗದವರಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಇನ್ನೂ ಸಾಮಾನ್ಯ /OBC/ EWS ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. SC/ST/PWBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವಿಲ್ಲ.
ಅಭ್ಯರ್ಥಿಗಳನ್ನ ಕಂಪ್ಯೂಟರ್ ಆಧಾರಿತ ಪರೀಕ್ಷೆ ಸ್ಕಿಲ್ ಪರೀಕ್ಷೆ ಆಧಾರದ ಮೂಲಕ ಆಯ್ಕೆ ಮಾಡಲಾಗುವುದು. ಪರೀಕ್ಷೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ 24,000 ರೂ.ರಿಂದ 98,000 ರೂ. ರ ವರೆಗೆ ವೇತನ ದೊರೆಯಲಿದೆ.