ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಓಎನ್‌ಜಿಸಿ) ಎಚ್‌ಆರ್ ಎಕ್ಸಿಕ್ಯೂಟಿವ್, ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಹುದ್ದೆಗಳಿಗೆ ಯುಜಿಸಿ ನೆಟ್ ಜೂನ್ 2020 ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲು ಮುಂದಾಗಿದೆ.
ಖಾಲಿ ಇರುವ 21 ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ongcindia.com ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಚ್‌ಆರ್‌ಇನ 15 ಹುದ್ದೆಗಳು ಮತ್ತು ಪಿಆರ್‌ಓನ 6 ಹುದ್ದೆಗಳಿಗೆ ನೇಮಕಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನವರಿ 4, 2022ರವರೆಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಯುಜಿಸಿ ನೆಟ್ 2020ರ ಅಂಕಗಳ ಮಾನದಂಡ, ವಯೋಮಿತಿ ಮತ್ತು ಅರ್ಜಿ ಶುಲ್ಕಗಳ ಕುರಿತ ವಿವರಗಳಿಗಾಗಿ ಓಎನ್‌ಜಿಸಿ ಪೋರ್ಟಲ್‌ನಲ್ಲಿ ನೋಡಬಹುದಾಗಿದೆ. ಯುಜಿಸಿ ನೆಟ್ 2020 ಅಂಕಗಳೊಂದಿಗೆ ಮುಖತಃ ಸಂದರ್ಶನದಲ್ಲಿ ನೀಡುವ ಪ್ರದರ್ಶನದ ಮೇಲೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು.