ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರ ಸಂಬಳದಲ್ಲಿ ಕಡಿತವಾಗಿದೆ. ಒಳ್ಳೆ ಕೆಲಸಕ್ಕಾಗಿ ಅನೇಕರು ಹುಡುಕಾಟ ನಡೆಸುತ್ತಿದ್ದಾರೆ. ನೀವೂ ಸರ್ಕಾರಿ ಕೆಲಸ ಬಯಸಿದ್ದರೆ ನಿಮಗೊಂದು ಒಳ್ಳೆಯ ಸುದ್ದಿಯಿದೆ.
ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್, ongcindia.com ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಅಲ್ಲಿ ನಿಮ್ಮ ಅರ್ಹತೆಗೆ ತಕ್ಕಂತೆ, ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 12. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು. ಒಎನ್ ಜಿಸಿ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ, ಒಟ್ಟು 313 ಪದವೀಧರ ಟ್ರೈನಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸ್ನಾತಕೋತ್ತರ ಪದವೀಧರರ ನೇಮಕಾತಿಯನ್ನು ಜಿಯೋ ವಿಜ್ಞಾನ ವಿಭಾಗದಲ್ಲಿ ಮಾಡಲಾಗುತ್ತಿದೆ. ಈ ನೇಮಕಾತಿಗೆ ಕೇವಲ ಅಂಕವನ್ನು ಮಾತ್ರ ಮಾನ್ಯ ಮಾಡಲಾಗುವುದು. ಯಾವುದೇ ಪರೀಕ್ಷೆಯಿಲ್ಲದೆ ಹುದ್ದೆ ಪಡೆಯಬಹುದು.
ಎಇಇ (ಸಿಮೆಂಟಿಂಗ್)- 7 ಹುದ್ದೆಗಳು, ಎಇಇ (ಸಿವಿಲ್)- 18 ಹುದ್ದೆಗಳು, ಎಇಇ (ಡ್ರಿಲ್ಲಿಂಗ್)-28 ಹುದ್ದೆಗಳು, ಎಇಇ (ಎಲೆಕ್ಟ್ರಿಕಲ್)- 39 ಹುದ್ದೆಗಳು, ಎಇಇ (ಎಲೆಕ್ಟ್ರಾನಿಕ್ಸ್)- 5 ಹುದ್ದೆಗಳು, ಎಇಇ (ಇನ್ಸ್ಟ್ರುಮೆಂಟೇಶನ್)-32 ಹುದ್ದೆಗಳು, ಎಇಇ ( ಎಲೆಕ್ಟ್ರಾನಿಕ್ಸ್- ಮೆಕ್ಯಾನಿಕಲ್)-31 ಹುದ್ದೆಗಳು, ಎಇಇ (ಉತ್ಪಾದನೆ) ರಾಸಾಯನಿಕ-16 ಹುದ್ದೆಗಳು, ಎಇಇ (ಉತ್ಪಾದನೆ) ಪೆಟ್ರೋಲಿಯಂ- 12 ಹುದ್ದೆಗಳು, ಎಇಇ (ಜಲಾಶಯ)- 7 ಹುದ್ದೆಗಳು, ರಸಾಯನಶಾಸ್ತ್ರಜ್ಞ-15 ಹುದ್ದೆಗಳು, ಭೂವಿಜ್ಞಾನಿ- 19 ಹುದ್ದೆಗಳು, ಭೂ ಭೌತವಿಜ್ಞಾನಿ- 24 ಹುದ್ದೆಗಳು, ಜಿಯೋಫಿಸಿಸ್ಟ್ – 12 ಹುದ್ದೆಗಳು, ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಆಫೀಸರ್- 12 ಹುದ್ದೆಗಳು, ಪ್ರೋಗ್ರಾಮಿಂಗ್ ಆಫೀಸರ್- 5 ಹುದ್ದೆಗಳು, ಸಾರಿಗೆ ಅಧಿಕಾರಿ- 7 ಹುದ್ದೆಗಳು, ಎಇಇ (ಇಂಡಸ್ಟ್ರಿಯಲ್ ಇಂಜಿನಿಯರಿಂಗ್)- 3 ಹುದ್ದೆಗಳು ಖಾಲಿ ಇವೆ.
ಅಭ್ಯರ್ಥಿಯು ಗೇಟ್ 2020 ಉತ್ತೀರ್ಣರಾಗಿರಬೇಕು ಮತ್ತು ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಪದವೀಧರರಾಗಿರಬೇಕು.