ಒಂದು ವರ್ಷದ ಮಗು ತನ್ನ ಹೆತ್ತವರೊಂದಿಗೆ ಅಮೆರಿಕಾದಲ್ಲಿ ಪ್ರವಾಸ ಮಾಡುವ ಮೂಲಕ ತಿಂಗಳಿಗೆ $ 1,000 (ರೂ. 75,000) ಗಳಿಸಿದೆ. ಬೇಬಿ ಬ್ರಿಗ್ಸ್ ಡಾರಿಂಗ್ಟನ್ ಈಗಾಗಲೇ 45 ವಿಮಾನಗಳಲ್ಲಿ ಪ್ರಯಾಣ ಬೆಳೆಸಿದ್ದಾನೆ.
ಒಂದು ವರ್ಷದ ಮಗು ಬ್ರಿಗ್ಸ್, ಅಮೆರಿಕಾದ 16 ರಾಜ್ಯಗಳಿಗೆ ತನ್ನ ಹೆತ್ತವರೊಂದಿಗೆ ಭೇಟಿ ನೀಡಿದ್ದಾನೆ. ಅಲಾಸ್ಕಾದ ಕರಡಿಗಳು, ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ತೋಳಗಳು, ಉತಾಹ್ ನ ಡೆಲಿಕೇಟ್ ಆರ್ಚ್ ಮತ್ತು ಕ್ಯಾಲಿಫೋರ್ನಿಯಾದ ಕಡಲತೀರಗಳನ್ನು ವೀಕ್ಷಿಸಿದ್ದಾನೆ.
ದೂರು ಕೇಳಿ ಬರುತ್ತಿದ್ದಂತೆಯೇ ಧ್ವನಿವರ್ಧಕದ ಶಬ್ಧ ಕಡಿಮೆ ಮಾಡಿದ ಮಸೀದಿ ಆಡಳಿತ ಮಂಡಳಿ
ಅಕ್ಟೋಬರ್ 14, 2020 ರಂದು ಜನಿಸಿದ ಬ್ರಿಗ್ಸ್, ಕೇವಲ ಮೂರು ವಾರಗಳಿರುವಾಗ ಹೆತ್ತವರೊಂದಿಗೆ ಪ್ರಯಾಣ ಬೆಳೆಸಿದ್ದಾನೆ. ಅವನ ಮೊದಲ ಪ್ರವಾಸವು ನೆಬ್ರಸ್ಕಾದ ಗ್ಲಾಂಪಿಂಗ್ ಸೈಟ್.
“ನಾನು ಪಾರ್ಟ್ ಟೈಮ್ ಟೂರಿಸ್ಟ್ಸ್ ಎಂಬ ಬ್ಲಾಗ್ ಅನ್ನು ಕೆಲವು ವರ್ಷಗಳಿಂದ ನಡೆಸುತ್ತಿದ್ದೆ. ಪ್ರಪಂಚದಾದ್ಯಂತ ಪ್ರಯಾಣಿಸಲು ಹಣ ನೀಡುತ್ತಿದ್ದೆ. ಆದರೆ, ನಾನು 2020 ರಲ್ಲಿ ಬ್ರಿಗ್ಸ್ ಗೆ ಗರ್ಭಿಣಿಯಾದಾಗ ನಿಜವಾಗಿಯೂ ಆತಂಕಗೊಂಡಿದ್ದೆ. ಯಾಕೆಂದರೆ ನನ್ನ ವೃತ್ತಿಜೀವನ ಇಲ್ಲಿಗೆ ಮುಗಿಯಿತು ಅಂತಾ ಅಂದುಕೊಂಡೆ” ಎಂದು ಬ್ರಿಗ್ಸ್ ತಾಯಿ ಜೆಸ್ ಹೇಳಿದ್ದಾರೆ.
ಚಾಲಕನಿಲ್ಲದೆ ಚಲಿಸಿದ ಬೈಕ್..! ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ
ಬ್ರಿಗ್ಸ್ ಕೇವಲ ಒಂಬತ್ತು ವಾರಗಳಿರುವಾಗ ಮೊದಲ ವಿಮಾನ ಪ್ರಯಾಣ ಆರಂಭಿಸಿದ್ದಾನೆ. ಈಗಾಗಲೇ 45 ಬಾರಿ ವಿಮಾನಗಳಲ್ಲಿ ಪಯಣಿಸಿದ್ದಾನೆ. ಕುಟುಂಬವು ಕರೋನ ವೈರಸ್ ಲಾಕ್ಡೌನ್ಗಳ ನಡುವೆ ಪ್ರಯಾಣ ಬೆಳೆಸಿದೆ. ಮಗುವಿನ ಪೋಷಕರು ಹೆಚ್ಚಾಗಿ ರಸ್ತೆ ಪ್ರವಾಸಗಳತ್ತ ಗಮನಹರಿಸಿದ್ದಾರೆ ಹಾಗೂ ಸ್ಥಳೀಯ ರಜಾ ದಿನಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರವಾಸಕ್ಕೆ ತೆರಳಿರುವುದಾಗಿ ಮಗುವಿನ ಪೋಷಕರು ಹೇಳಿದ್ದಾರೆ.