alex Certify ಕುಡುಕರ ಕುರಿತ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡುಕರ ಕುರಿತ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲೇ ಅತಿ ಹೆಚ್ಚು ಜನರು ಕುಡಿತಕ್ಕೆ ದಾಸರಾಗಿರುವ ದೇಶ ಕಾಂಗರೂ ನಾಡು ಆಸ್ಟ್ರೇಲಿಯಾ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ. ಗ್ಲೋಬಲ್ ಡ್ರಗ್ ಸರ್ವೆ (ಜಿಡಿಎಸ್) ಫಲಿತಾಂಶಗಳ ಪ್ರಕಾರ, 2020 ರಲ್ಲಿ ಆಸ್ಟ್ರೇಲಿಯಾವು ಕುಡುಕ ದೇಶವಾಗಿ ಹೊರಹೊಮ್ಮಿದೆ.

ಲಂಡನ್ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಗ್ಲೋಬಲ್ ಡ್ರಗ್ ಸರ್ವೆ, ಗ್ರಾಹಕರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳಿಂದಾಗಿ ಆಲ್ಕೋಹಾಲ್ ಸೇವನೆ ಹೆಚ್ಚಾಗಿದೆ ಎಂದು ವ್ಯಾಖ್ಯಾನಿಸಿದೆ.

ತಮ್ಮ ಸಮೀಕ್ಷೆಗಾಗಿ, ಜಿಡಿಎಸ್ ನಲ್ಲಿನ ಸಂಶೋಧಕರು 22 ದೇಶಗಳಿಂದ 32,022 ಜನರಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ ಮತ್ತು ವರ್ಷದ ಕೊನೆಯಲ್ಲಿ ಕೆಲವು ತಿಂಗಳುಗಳ ಅವಧಿಯಲ್ಲಿ ಫಲಿತಾಂಶಗಳನ್ನು ತೆಗೆದುಕೊಂಡಿದ್ದಾರೆ. ಸಮೀಕ್ಷೆಯು ಡಬ್ಲ್ಯೂಎಚ್ಒ ಪ್ರಶ್ನಾವಳಿಯನ್ನು ಅವಲಂಬಿಸಿದೆ. ಇದಕ್ಕೆ ಸರಾಸರಿಯಾಗಿ, ಪ್ರತಿಕ್ರಿಯಿಸಿದವರು ವರ್ಷಕ್ಕೆ 14.6 ಬಾರಿ ಕುಡಿದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಆಸ್ಟ್ರೇಲಿಯಾದಿಂದ ಬಂದವರು ತಿಂಗಳಿಗೆ ಎರಡು ಬಾರಿ ಕುಡಿದಿದ್ದರೆ, ಮೆಕ್ಸಿಕೋದಿಂದ ಬಂದವರು ಕಳೆದ 12 ತಿಂಗಳುಗಳಲ್ಲಿ 8.9 ಬಾರಿ ಕುಡಿದಿದ್ದಾರೆ ಎಂದು ವರದಿಯಾಗಿದೆ. ಜನರನ್ನು ಮದ್ಯಪಾನಕ್ಕೆ ತಳ್ಳುವ ಸಂತೋಷ, ಹಾನಿ ಮತ್ತು ವಿನೋದದಂತಹ ಹಲವಾರು ಅಂಶಗಳನ್ನು ಸಮೀಕ್ಷೆಯು ಒಳಗೊಂಡಿತ್ತು.

ಬ್ರೆಜಿಲ್, ಮೆಕ್ಸಿಕೋ ಮತ್ತು ಸ್ಪೇನ್‌ನಲ್ಲಿರುವ ಜನರು ಕುಡಿದು ಬರುವಾಗ ಹಾನಿಯನ್ನು ತಪ್ಪಿಸಲು ಆದ್ಯತೆ ನೀಡಿದವರಾಗಿದ್ದಾರೆ. ಸಂತೋಷದ ವಿಚಾರದಲ್ಲಿ ನೆದರ್ಲ್ಯಾಂಡ್ಸ್ ಅಗ್ರಸ್ಥಾನವಾಗಿ ಹೊರಹೊಮ್ಮಿದೆ. ಮೋಜಿನ ಕಾರಣಕ್ಕಾಗಿ ಆಲ್ಕೋಹಾಲ್ ಸೇವನೆ ಮಾಡಿದ್ದು ಎಂದು ಹೇಳಿದ ಫಿನ್ಲ್ಯಾಂಡ್ ವಿನೋದದ ವಿಚಾರದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಇನ್ನು ಕೆಲವರಿಗೆ ಕುಡಿದ ಮೇಲೆ, ಅಯ್ಯೋ ಯಾಕಾದ್ರೂ ಕುಡಿದೆನೋ ಎಂಬ ಪಶ್ಚಾತ್ತಾಪ ಕಾಡುತ್ತಿರುತ್ತದೆ. ಕುಡಿದು ನಶೆ ಇಳಿದ ಬಳಿಕೆ ಹಲವಾರು ಮಂದಿ ವಿಷಾದ ವ್ಯಕ್ತಪಡಿಸುತ್ತಾರೆ. ಅದರಲ್ಲಿ ಐರ್ಲೆಂಡ್ ಜನರು ಅತಿ ಹೆಚ್ಚು ವಿಷಾದ ವ್ಯಕ್ತಪಡಿಸಿದವರಾಗಿದ್ದಾರೆ.

ಅಂದಹಾಗೆ, ಕುಡಿದು ಅವಾಂತರ ಅಥವಾ ಅಪರಾಧ ಮಾಡುವವರು ಅನೇಕರಿದ್ದಾರೆ. ಆದರೆ, ಡೆನ್ಮಾರ್ಕ್ ದೇಶದಿಂದ ಬಂದವರು ಕಡಿಮೆ ಅಪರಾಧದ ನಿದರ್ಶನಗಳನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...