
ಅನೇಕ ಟೆಕ್ ಕಂಪನಿಗಳಿಂದ ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದಿರುವ ಬೆಂಗಳೂರು, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು 1970 ರ ದಶಕದ ಆರಂಭದಲ್ಲೇ ಹೆಸರು ಪಡೆದಿತ್ತು. ಇಲ್ಲಿ ಅನೇಕ ಕಂಪನಿಗಳು ಸ್ಥಾಪನೆಗೊಂಡಿದ್ದವು.
50 ವರ್ಷಗಳ ಹಿಂದೆ ರಿಚ್ಮಂಡ್ ರಸ್ತೆಯ ನೆಲಮಾಳಿಗೆಯಲ್ಲಿ ಭಾರತದ ಮೊದಲ ಕಂಪ್ಯೂಟರ್ ಕಂಪನಿಗಳಲ್ಲಿ ಒಂದಾದ ಪ್ರೊಸೆಸರ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಪಿಎಸ್ಐ) ಹುಟ್ಟಿಕೊಂಡಿತು.
ಡಿಸೆಂಬರ್ 29, 1973 ರಂದು ಸ್ಥಾಪನೆಯಾದ PSI ಈಗ ProcSys (ಪ್ರಾಕ್ಸಿಸ್) ಎಂದು ಕರೆಯಲ್ಪಡುತ್ತದೆ. ಮುಂದಿನ ವಾರ ಈ ಕಂಪನಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಕೇರಳದಲ್ಲಿ ನೋಂದಾಯಿಸಲ್ಪಟ್ಟ ಕಂಪನಿಯು ರಿಚ್ಮಂಡ್ ರಸ್ತೆಯಲ್ಲಿರುವ ಕಟ್ಟಡವೊಂದರ ನೆಲಮಾಳಿಗೆಯಲ್ಲಿ ತನ್ನ ಕಚೇರಿಯನ್ನು ತೆರೆಯಿತು.
ಪಿಎಸ್‌ಐನ ಕಥೆಯು ಅದರ ಮೂವರು ಸಂಸ್ಥಾಪಕ ನಿರ್ದೇಶಕರೊಂದಿಗೆ ಆರಂಭವಾಗುತ್ತದೆ. ಪ್ರಥಮವಾಗಿ ದಿವಂಗತ ವಿಕೆ ರವೀಂದ್ರನ್ (ರವಿ), ಅವರು ಅಮೆರಿಕದಲ್ಲಿ ಬೆಲ್ ಲ್ಯಾಬ್ಸ್ ನಲ್ಲಿ ಕೆಲಸ ಮಾಡುವ ಅವಕಾಶವನ್ನು ತ್ಯಜಿಸಿ ಇಲ್ಲಿ ಐಟಿ ಕಂಪನಿಯನ್ನು ಪ್ರಾರಂಭಿಸಲು ಭಾರತಕ್ಕೆ ಬಂದರು. ಆಗ ಕೇರಳದಲ್ಲಿ ತೋಷಿಬಾ ಆನಂದ್ ನೊಂದಿಗೆ ಕೆಲಸ ಮಾಡುತ್ತಿದ್ದ ರವೀಂದ್ರದನ್ ಸಹೋದರ ವಿಕೆ ಹರೀಂದ್ರನ್ (ಹರಿ) ಕಂಪನಿಯನ್ನು ಸ್ಥಾಪಿಸಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಮೂರನೇ ಸದಸ್ಯ ವಿನಯ್ ದೇಶಪಾಂಡೆ ಸಹ ಬೆಂಗಳೂರಿನಲ್ಲಿ ಪಿಎಸ್‌ಐ ಸ್ಥಾಪಿಸಲು ಅವರೊಂದಿಗೆ ಸೇರಿಕೊಂಡರು.
ಪಿಎಸ್‌ಐ ಎರ್ನಾಕುಲಂನಲ್ಲಿ ಡಿಸೆಂಬರ್ 29, 1973 ರಂದು ನೋಂದಾಯಿಸಲ್ಪಟ್ಟ ನಂತರ ಬೆಂಗಳೂರಿನಲ್ಲಿ ಕಚೇರಿಯನ್ನು ತೆರೆಯಿತು. “ಭಾರತದ ಪ್ರತಿಯೊಂದು ಮನೆಗೂ ಮೈಕ್ರೊ ಪ್ರೊಸೆಸರ್‌ಗಳನ್ನು ಹೊಂದಿರುವ ಕಂಪ್ಯೂಟರ್‌ಗಳನ್ನು ಉತ್ಪಾದಿಸುವ ಆಲೋಚನೆ ಈ ಕಂಪನಿಗೆ ಇತ್ತು.
ಭಾರತದಿಂದ ಐಬಿಎಂ ನಿರ್ಗಮನ ಮತ್ತು ಐಟಿ ಕಂಪನಿಗಳ ಸ್ಥಾಪನೆಗೆ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಈ ಸಮಯ ಉತ್ತಮವಾಗಿತ್ತು. ಇಂತಹ ಸಂದರ್ಭದಲ್ಲಿ ಪಿಎಸ್ಐ ತಲೆಯೆತ್ತಿತು.
ರವಿ ಅವರು ದೂರದೃಷ್ಟಿಯುಳ್ಳವರಾಗಿದ್ದರು. ಪ್ರೊಸೆಸರ್, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಅವರು ಹೇಳುತ್ತಿದ್ದರು. ಆದ್ದರಿಂದ ಕಂಪನಿಯನ್ನು ಪ್ರೊಸೆಸರ್ ಸಿಸ್ಟಮ್ಸ್ ಇಂಡಿಯಾ ಎಂದು ಕರೆಯಲಾಯಿತು ಎಂದು ಪ್ರಾಕ್ಸಿಸ್‌ನ ಕಾರ್ಯಕಾರಿ ಅಧ್ಯಕ್ಷೆ ಮತ್ತು ದಿವಂಗತ ಹರೀಂದ್ರನ್ ಅವರ ಪತ್ನಿ ನಂದನಾ ಇಶ್ಬಿಲಿಯಾ ನೆನಪಿಸಿಕೊಂಡರು.