alex Certify BIG NEWS: ಇನ್ನು ದೇಶಾದ್ಯಂತ ಏಕರೂಪದ ಸಮಯ ಪಾಲನೆ ಕಡ್ಡಾಯ: ‘ಒನ್ ನೇಷನ್ ಒನ್ ಟೈಮ್’ ಕರಡು ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ನು ದೇಶಾದ್ಯಂತ ಏಕರೂಪದ ಸಮಯ ಪಾಲನೆ ಕಡ್ಡಾಯ: ‘ಒನ್ ನೇಷನ್ ಒನ್ ಟೈಮ್’ ಕರಡು ಮಾರ್ಗಸೂಚಿ ಪ್ರಕಟ

ನವದೆಹಲಿ: ದೇಶಾದ್ಯಂತ ಏಕರೂಪದ ಸಮಯ ಪಾಲನೆ ಮತ್ತು ಪ್ರದರ್ಶನಕ್ಕಾಗಿ ಕೇಂದ್ರ ಸರ್ಕಾರ ಕಾನೂನು ಮಾಪನ ವಿಜ್ಞಾನ ಅಧಿನಿಯಮ -2025 ಸಿದ್ಧಪಡಿಸಿದೆ.

ಏಕರೂಪದ ಭಾರತೀಯ ಕಾಲಮಾನ ನಿಗದಿಪಡಿಸುವ ಸಂಬಂಧ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಕರಡು ಮಾರ್ಗಸೂಚಿಯನ್ನು ಭಾನುವಾರ ಪ್ರಕಟಿಸಿದೆ. ಸಾರ್ವಜನಿಕ ಆಡಳಿತ, ಕಾನೂನು, ಹಣಕಾಸು ವಹಿವಾಟು, ಅಧಿಕೃತ ದಾಖಲೆ ಸೇರಿ ಎಲ್ಲಾ ವಲಯಗಳಲ್ಲಿ ಏಕರೂಪದ ಭಾರತೀಯ ಕಾಲಮಾನವನ್ನು ಅನುಸರಿಸುವ ಅಗತ್ಯವಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಕರಡು ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕರು ಫೆಬ್ರವರಿ 14ರವರೆಗೆ ಸಲಹೆ ಸೂಚನೆ ನೀಡಬಹುದಾಗಿದೆ.

ಈ ನೀತಿಯು ದೇಶದ ಎಲ್ಲ ಸರ್ಕಾರಿ, ಖಾಸಗಿ, ವಾಣಿಜ್ಯ, ಶೈಕ್ಷಣಿಕ, ಕಾನೂನು ಸಂಸ್ಥೆಗಳಲ್ಲಿ ಒಂದೇ ರೂಪದ ಸಮಯ ಪ್ರದರ್ಶನ ಕಡ್ಡಾಯಗೊಳಿಸಲಿದೆ. ಈ ಕರಡು ನೀತಿಗೆ ಪ್ರಕ್ರಿಯೆ ಕಳುಹಿಸಲು ಫೆಬ್ರವರಿ 14ರ ವರೆಗೆ ಕೇಂದ್ರ ಸರ್ಕಾರ ಸಮಯ ನೀಡಿದೆ.

ದಿನಾಂಕ ಪ್ರದರ್ಶನಕ್ಕೆ ದಿನ, ತಿಂಗಳು, ವರ್ಷ ಮಾದರಿ ಜೊತೆಗೆ ಸಮಯಕ್ಕೆ ಗಂಟೆ, ನಿಮಿಷ, ಸೆಕೆಂಡ್ ಮಾದರಿಯನ್ನು ನೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಬಾಹ್ಯಾಕಾಶ ಸಂಶೋಧನೆ, ಖಗೋಳಶಾಸ್ತ್ರ, ವೈಜ್ಞಾನಿಕ ಸಂಶೋಧನೆ, ವಿಮಾನಯನ ಕ್ಷೇತ್ರವನ್ನು ಇದರಿಂದ ಹೊರತುಪಡಿಸಲಾಗಿದೆ. ಈ ಸಂಸ್ಥೆಗಳು ದೇಶಿಯ ಜೊತೆಗೆ ವಿದೇಶಿ ಸಮಯವನ್ನು ಕೂಡ ಬಳಕೆ ಮಾಡಬಹುದಾಗಿದೆ. ಏಕರೂಪ ಸಮಯದಿಂದ ಸೈಬರ್ ಅಪರಾಧ ತಡೆ, ಪರಿಪೂರ್ಣ ಸಮಯ ಪಾಲನೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...