alex Certify ದೆಹಲಿ: 3 ದಿನದಲ್ಲಿ ಇ-ಬಸ್ ಏರಿದ 1 ಲಕ್ಷ ಪ್ರಯಾಣಿಕರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ: 3 ದಿನದಲ್ಲಿ ಇ-ಬಸ್ ಏರಿದ 1 ಲಕ್ಷ ಪ್ರಯಾಣಿಕರು…..!

ಡೀಸೆಲ್, ಪೆಟ್ರೋಲ್ ವಾಹನಗಳ ದಟ್ಟಣೆಯಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯದಿಂದ ಹೊರ ಬರಲು ದೆಹಲಿ ಸರ್ಕಾರ ದೇಶದ ರಾಜಧಾನಿಯಲ್ಲಿ ಪರಿಚಯಿಸಿರುವ ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ ಸಂಚಾರ ಆರಂಭಿಸಿದ ಕೇವಲ ಮೂರು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣಿಕರಲ್ಲಿ 40% ಮಂದಿ ಮಹಿಳೆಯರು ಸೇರಿರುವುದು ವಿಶೇಷವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಾರಿಗೆ ಮಂತ್ರಿ ಕೈಲಾಶ್ ಗೆಹ್ಲೋಟ್ ಅವರು, ನಮ್ಮ 150 ಇ-ಬಸ್ ಗಳಲ್ಲಿ ಕೇವಲ 3 ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಬಣ್ಣಿಸಿದ್ದಾರೆ.

BIG NEWS: ಅಂಧರಿಗೆ ನೆರವಾಗುವ ಸ್ಮಾರ್ಟ್ ವಾಚ್ ಅಭಿವೃದ್ಧಿಪಡಿಸಿದ ಐಐಟಿ

ಈ ಪೈಕಿ 40% ರಷ್ಟು ಮಹಿಳಾ ಪ್ರಯಾಣಿಕರಿರುವುದು ವಿಶೇಷವಾಗಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸುವತ್ತ ನಾವು ಗಮನಹರಿಸಲಿದ್ದೇವೆ ಎಂದಿದ್ದಾರೆ.

ಮೇ 24 ರಂದು ಕೇಜ್ರಿವಾಲ್ ಈ 150 ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದರು ಮತ್ತು ಸಾರ್ವಜನಿಕ ಸಾರಿಗೆ ಅದರಲ್ಲೂ ಇ-ಬಸ್ ಗಳಲ್ಲಿ ಪ್ರಯಾಣಿಸುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೇ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಇ-ಬಸ್ ಗಳಲ್ಲಿ ಉಚಿತ ಪ್ರಯಾಣದ ಕೊಡುಗೆ ನೀಡಲಾಗಿತ್ತು.

ಮೊದಲ ದಿನ 12,000 ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸಿದ್ದರೆ, ಎರಡನೇ ದಿನ 28,000 ಮತ್ತು ಮೂರನೇ ದಿನವಾದ ಮೇ 26 ರಂದು 52,000 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ಇ-ಬಸ್ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಎಂ ಕೇಜ್ರಿವಾಲ್, ಇ-ಬಸ್ ನಲ್ಲಿ ಪ್ರಯಾಣಿಸಿ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದವರಿಗೆ ಬಹುಮಾನ ಯೋಜನೆಯನ್ನೂ ಪ್ರಕಟಿಸಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಬಸ್ ನಲ್ಲಿ ಪ್ರಯಾಣಿಸುವ ತಮ್ಮ ಸೆಲ್ಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...