ಬೆಂಗಳೂರು : ಕುಡುಕರ ಕಷ್ಟಗಳು ನೂರಾ ಹನ್ನೊಂದು..ಎಂಬ ಹಾಡು ಕೇಳಿರಬಹುದು. ಕುಡುಕರ ಕಷ್ಟಗಳನ್ನು ಬಹಳ ಚೆನ್ನಾಗಿ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ.
ಹೌದು, ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ತಗುಲಿದ್ದು, ನಮ್ಮ ಕಷ್ಟಗಳನ್ನು ನಾವು ಯಾರಿಗೆ ಹೇಳೋದು ಎಂದು ಪಾನಪ್ರಿಯರು ತಲೆಬಿಸಿಕೊಂಡಿದ್ದಾರೆ.ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತಾ ಕೊರಗುತ್ತಿದ್ದ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ಸಿಕ್ಕಿದೆ. ದುಬಾರಿ ದುನಿಯಾದಲ್ಲಿ ‘ಮದ್ಯ’ ಪ್ರಿಯರಿಗೆ ಆಘಾತ ಎದುರಾಗಿದ್ದು, ಅದರಲ್ಲೂ ಬಡವರು ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ಕುಡಿಯುವ ಮೂರು ಬ್ರ್ಯಾಂಡ್ ಗಳ ಮದ್ಯದ ಬೆಲೆ ಏರಿಕೆಯಾಗಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಮದ್ಯದ ಕಂಪನಿಗಳು ಬೆಲೆ ಏರಿಕೆ ಮಾಡಿದೆ.
1) ಬ್ರಾಂಡ್- 1 (180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
2)ಬ್ರಾಂಡ್ – 2 (180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
3) ಬ್ರಾಂಡ್ – 3 (180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ
ಎಂಆರ್ಪಿ ಔಟ್ಲೆಟ್ಗಳಲ್ಲಿ180 ಎಂಎಲ್ನ ಓಟಿ ಮತ್ತು 8 ಪಿಎಂ 100 ರಿಂದ 123 ರುಪಾಯಿಗೆ, ಬಿಪಿಯು 123 ರಿಂದ 159 ರುಪಾಯಿಗೆ ಹೆಚ್ಚಳವಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಬೆಲೆಯಲ್ಲಿ ಹೆಚ್ಚಳವಾಗಲಿದೆ.