
ಇಬ್ಬರು ಮಕ್ಕಳು ಇದ್ದರು ಅಂದರೆ ದಿನವಿಡೀ ಒಬ್ಬರಿಗೊಬ್ಬರು ಹೊಡೆಯುತ್ತಾ ಬಡಿಯುತ್ತಾ ಇರ್ತಾರೆ. ಮಕ್ಕಳ ಈ ಕಾಟದಿಂದ ಪಾರಾಗೋಕೆ ಇಲ್ಲೊಬ್ಬ ತಾಯಿ ಭರ್ಜರಿ ಪ್ಲಾನ್ ಮಾಡಿದ್ದು ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
ಟ್ವಿಟರ್ನಲ್ಲಿ ದೀಕ್ಷಾ ಬಸು ಎಂಬಾಕೆ ಈ ಟ್ರಿಕ್ನ್ನು ಶೇರ್ ಮಾಡಿದ್ದಾರೆ. ಇವರು ತಮ್ಮ ಮಕ್ಕಳಿಗೆ ದಿನಕ್ಕೆ ಒಂದು ಬಾರಿ ಒಬ್ಬರಿಗೆ ಒಬ್ಬರು ಹೊಡೆಯಬಹುದು ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ದಿನಕ್ಕೆ ಒಂದು ಬಾರಿ ಮಾತ್ರ ಹೊಡೆಯೋಕೆ ಅವಕಾಶ ಇರೋದ್ರಿಂದ ಸುಮ್ಮ ಸುಮ್ಮನೇ ಕಿತ್ತಾಡೋದನ್ನ ನಿಲ್ಲಿಸಿದ್ದಾರಂತೆ. ಅಲ್ಲದೇ ಇದರಿಂದ ಮನೆಯಲ್ಲಿ ಕಿತ್ತಾಟವೇ ನಿಂತು ಹೋಗಿದೆಯಂತೆ.
ನೆಟ್ಟಿಗರು ದೀಕ್ಷಾ ಬಸು ಅವರ ಪ್ಲಾನ್ಗೆ ಫಿದಾ ಆಗಿದ್ದಾರೆ. ಈ ಟ್ವೀಟ್ 37000ಕ್ಕೂ ಅಧಿಕ ಲೈಕ್ಸ್ ಹಾಗೂ 3000ಕ್ಕೂ ಅಧಿಕ ರಿಟ್ವೀಟ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.