ವಾಷಿಂಗ್ಟನ್: ಅಮೆರಿಕದ ಒಕ್ಲಹೋಮ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೆಮೋರಿಯಲ್ ಡೇ ಫೆಸ್ಟಿವಲ್ ನಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, 9 ವರ್ಷದ ಬಾಲಕ ಸೇರಿದಂತೆ 7 ಜನರಿಗೆ ಗುಂಡೇಟಿನಿಂದ ಗಾಯವಾಗಿದೆ. ಮೆಮೋರಿಯಲ್ ಡೇ ಫೆಸ್ಟಿವಲ್ ನಲ್ಲಿ 1500 ಜನ ಭಾಗಿಯಾಗಿದ್ದರು. ಈ ವೇಳೆ ಫೈರಿಂಗ್ ಮಾಡಲಾಗಿದೆ.
ಪೂರ್ವ ಒಕ್ಲಹೋಮಾದಲ್ಲಿ ಹೊರಾಂಗಣ ಉತ್ಸವದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಉದ್ರಿಕ್ತ ಜನರು ರಕ್ಷಣೆಗಾಗಿ ಓಡಿದ್ದಾರೆ.
ಟುಲ್ಸಾದ ಆಗ್ನೇಯಕ್ಕೆ ಸುಮಾರು 10 ಮೈಲಿ ದೂರದಲ್ಲಿರುವ ಟಾಫ್ಟ್ ಬಳಿಯ ಸ್ಮಾರಕ ದಿನದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದವರಲ್ಲಿ ಇಬ್ಬರು ಬಾಲಾಪರಾಧಿಗಳು ಸೇರಿದ್ದಾರೆ ಎಂದು ಒಕ್ಲಹೋಮ ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಹೇಳಿಕೆಯಲ್ಲಿ ತಿಳಿಸಿದೆ.