ದೇಶದಲ್ಲಿ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನ ಈಗಾಗಲೇ ಪೂರ್ಣಗೊಂಡಿದ್ದು, ಮತ ಎಣಿಕೆ ಜೂನ್ 4ರ ನಾಳೆ ನಡೆಯಲಿದೆ. ಬಹುತೇಕ ಅಂದು ಸಂಜೆಯೊಳಗೆ ಫಲಿತಾಂಶ ಹೊರಬೀಳಲಿದ್ದು ಮುಂದಿನ ಐದು ವರ್ಷಗಳ ಕಾಲ ದೇಶದ ಆಡಳಿತ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ತೀರ್ಮಾನವಾಗಲಿದೆ.
ಇದರ ಮಧ್ಯೆ ಅಂತಿಮ ಹಂತದ ಮತದಾನ ನಡೆದ ದಿನವಾದ ಶನಿವಾರ ಸಂಜೆ 6.30 ಗಂಟೆಯಿಂದ ಚುನಾವಣೋತ್ತರ ಸಮೀಕ್ಷೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರ ಹಿಡಿಯುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಬೆಟ್ಟಿಂಗ್ ದಂಧೆಯೂ ಜೋರಾಗಿದ್ದು, ಹಣ ಮಾತ್ರವಲ್ಲದೆ ಜಮೀನು, ಕುರಿ, ಕೋಳಿ, ಆಡು ಸಹ ಬೆಟ್ಟಿಂಗ್ ಇಡಲಾಗುತ್ತಿದೆ. ಅದರಲ್ಲೂ ಕರ್ನಾಟಕದ ಪ್ರತಿಷ್ಠಿತ ಕ್ಷೇತ್ರಗಳಾದ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಮೊದಲಾದವು ಎಲ್ಲರ ಗಮನ ಸೆಳೆದಿದೆ.