alex Certify ಒಂದು ದಿನ ‘ಥೈರಾಯ್ಡ್’ ಔಷಧಿ ಮರೆತರೆ ದೇಹದ ಮೇಲೆ ಆಗುತ್ತೆ ಇಂಥಾ ಪರಿಣಾಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ದಿನ ‘ಥೈರಾಯ್ಡ್’ ಔಷಧಿ ಮರೆತರೆ ದೇಹದ ಮೇಲೆ ಆಗುತ್ತೆ ಇಂಥಾ ಪರಿಣಾಮ..!

ಥೈರಾಯ್ಡ್ ಸಮಸ್ಯೆ ಇರುವವರು ನಿಯಮಿತವಾಗಿ ಔಷಧಿಗಳನ್ನು ಸೇವಿಸುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಈ ಔಷಧಿ ಸೇವನೆ ಮರೆತು ಹೋಗುವುದುಂಟು. ಕೇವಲ ಒಂದು ದಿನ ಥೈರಾಯ್ಡ್‌ ಔಷಧ ತೆಗೆದುಕೊಳ್ಳುವುದನ್ನು ಮರೆತರೂ ಅದರ ಪರಿಣಾಮ ಏನಾಗುತ್ತೆ ಎಂಬುದನ್ನು ತಿಳಿದುಕೊಳ್ಳಬೇಕು.

ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿರುವುದರಿಂದ ನಿಯಮಿತವಾಗಿ ಔಷಧಿ ತೆಗೆದುಕೊಳ್ಳಬೇಕು. ಅತ್ಯಂತ ಸಾಮಾನ್ಯವಾದ ಥೈರಾಯ್ಡ್ ಔಷಧಿಯೆಂದರೆ ಲೆವೊಥೈರಾಕ್ಸಿನ್. ಅದರ ಡೋಸೇಜ್ ತೆಗೆದುಕೊಳ್ಳುವಲ್ಲಿ ಕ್ರಮಬದ್ಧತೆ ಬಹಳ ಮುಖ್ಯ. ಆದರೆ ಕೆಲವೊಮ್ಮೆ ತಪ್ಪಾಗಿ ಒಂದು ದಿನದ ಡೋಸ್ ತೆಗೆದುಕೊಳ್ಳುವುದನ್ನು ಮರೆತುಬಿಡುವುದು ಸಹಜ. ಒಂದು ದಿನ ಔಷಧ ಮರೆತರೆ ಏನಾದರೂ ಅನಾಹುತ ಆಗಬಹುದು ಎಂಬ ಭಯ ಸಹಜ. ಆದರೆ ಈ ಭಯದ ಅಗತ್ಯವಿಲ್ಲ.

ಲೆವೊಥೈರಾಕ್ಸಿನ್ ಸುಮಾರು 7 ದಿನಗಳ ಅರ್ಧ-ಜೀವಿತಾವಧಿಯನ್ನು ಹೊಂದಿದೆ. ಅಂದರೆ ಇದರ ಒಂದು ಡೋಸ್‌ನ ಪರಿಣಾಮ 7 ದಿನಗಳವರೆಗೆ ಇರುತ್ತದೆ. ಆದ್ದರಿಂದ ಒಂದು ದಿನದ ಡೋಸ್ ಮರೆತುಹೋದರೂ, ಹಿಂದಿನ ಡೋಸ್‌ನ ಪರಿಣಾಮವು ದೇಹದಲ್ಲಿ ಇನ್ನೂ ಇರುತ್ತದೆ.

ಒಂದು ದಿನದ ತಪ್ಪಿನಿಂದಾಗಿ ಥೈರಾಯ್ಡ್ ಹಾರ್ಮೋನುಗಳ ಮಟ್ಟವು ಇದ್ದಕ್ಕಿದ್ದಂತೆ ಅಪಾಯಕಾರಿಯಾಗುವುದಿಲ್ಲ. ಒಂದು ದಿನದ ತಪ್ಪಿನಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ನಿಯಮಿತವಾಗಿ ಈ ತಪ್ಪನ್ನು ಮುಂದುವರಿಸಬಾರದು, ಡೋಸೇಜ್ ಅನ್ನು ಮುಂದುವರಿಸಬೇಕು.

ಥೈರಾಯ್ಡ್ ಎಂದರೇನು ?

ಥೈರಾಯ್ಡ್ ಗ್ರಂಥಿಯು ಕುತ್ತಿಗೆಯ ಕೆಳಭಾಗದಲ್ಲಿರುವ ಪ್ರಮುಖ ಗ್ರಂಥಿಯಾಗಿದೆ. ಇದು ದೇಹಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಥೈರಾಯ್ಡ್, ಥೈರಾಕ್ಸಿನ್ ಮತ್ತು ಕ್ಯಾಲ್ಸಿಟೋನಿನ್ ಎಂಬ ಹಾರ್ಮೋನ್‌ಗಳನ್ನು ಉತ್ಪಾದಿಸುವ ಎರಡು ಹಾಲೆಗಳಿಂದ ಮಾಡಲ್ಪಟ್ಟಿದೆ.

ಥೈರಾಕ್ಸಿನ್ ಶಕ್ತಿ ಉತ್ಪಾದನೆ, ತೂಕ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಆದರೆ ಕ್ಯಾಲ್ಸಿಟೋನಿನ್ ಮೂಳೆಗಳ ಬೆಳವಣಿಗೆ ಮತ್ತು ಬಲಕ್ಕೆ ಕಾರಣವಾಗಿದೆ. ಥೈರಾಯ್ಡ್ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಗೆ ಈ ಎರಡು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಥೈರಾಯ್ಡ್ ಸಮಸ್ಯೆಯಿದ್ದರೆ ದೇಹದಲ್ಲಿನ ಅನೇಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...