ಛತ್ತೀಸ್ ಗಢದಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಓರ್ವ ಪೊಲೀಸ್ ಸಾವು ಕಂಡಿದ್ದು, ನಾಲ್ವರು ನಕ್ಸಲರು ಹತ್ಯೆಯಾಗಿದ್ದಾರೆ.
ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಎನ್ ಕೌಂಟರ್ ನಲ್ಲಿ ನಾಲ್ವರು ನಕ್ಸಲರು ಹತರಾಗಿದ್ದಾರೆ. ಅವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳದಲ್ಲಿ ಎಕೆ-47, ಎಸ್ಎಲ್ಆರ್ ಮತ್ತು ಇತರ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಬಸ್ತಾರ್ ಐಜಿ ಪಿ. ಸುಂದರರಾಜ್ ಪ್ರಕಾರ, ನಾಲ್ಕು ಜಿಲ್ಲೆಗಳ ಡಿಆರ್ಜಿ ಮತ್ತು ಎಸ್ಟಿಎಫ್ ತಂಡಗಳು ಭಾಗವಹಿಸುವುದರೊಂದಿಗೆ ಎನ್ಕೌಂಟರ್ ಇನ್ನೂ ಸಕ್ರಿಯವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಕಾರ್ಯಾಚರಣೆ ವೇಳೆ ದಾಂತೇವಾಡ ಡಿಆರ್ಜಿ ಹೆಡ್ ಕಾನ್ಸ್ ಟೇಬಲ್ ಸನ್ನು ಕರಮ್ ಕೂಡ ಹತರಾಗಿದ್ದಾರೆ.