ಉತ್ತರಾಖಂಡ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ, ಸಿಎಂ ಪುಷ್ಕರ್ ಸಿಂಗ್ ಧಾಮಿ ಅತಿದೊಡ್ಡ ಹೇಳಿಕೆ ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಏಕರೂಪ ನಾಗರಿಕ ಸಂಹಿತೆ(UCC)ಗೆ ಕರಡು ರಚಿಸಲು ಸಮಿತಿಯೊಂದನ್ನು ರಚಿಸುತ್ತೇವೆ ಎಂದಿದ್ದಾರೆ. ಅಲ್ಲದೇ ಉತ್ತರಾಖಂಡದಲ್ಲಿ ಶೀಘ್ರದಲ್ಲಿಯೇ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಕೋವಿಡ್ ಬೂಸ್ಟರ್ ಲಸಿಕೆ ಎಷ್ಟು ದಿನಗಳ ಕಾಲ ರಕ್ಷಣೆ ನೀಡುತ್ತದೆ…? ಅಮೆರಿಕಾ ತಜ್ಞರ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
ಖತಿಮಾದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಹೊಸ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರಿಂದ ರಾಜ್ಯದ ಎಲ್ಲರಿಗೂ ಸಮಾನ ಹಕ್ಕುಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.
ಹೊಸ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ರಾಜ್ಯದಲ್ಲಿ ಯುಸಿಸಿ ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸಲಿದೆ. ಈ ಕಾನೂನು ಮದುವೆಗಳು, ವಿಚ್ಛೇದನ, ಭೂಮಿ-ಆಸ್ತಿ ಮತ್ತು ಎಲ್ಲಾ ಜನರಿಗೆ ಅವರ ನಂಬಿಕೆಯನ್ನು ಲೆಕ್ಕಿಸದೆ ಉತ್ತರಾಧಿಕಾರದ ಬಗ್ಗೆ ಒಂದೇ ರೀತಿಯ ಕಾನೂನುಗಳನ್ನು ಒದಗಿಸುತ್ತದೆ. ಕಾನೂನು ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುತ್ತದೆ, ಲಿಂಗ ನ್ಯಾಯವನ್ನು ಹೆಚ್ಚಿಸುತ್ತದೆ, ಮಹಿಳಾ ಸಬಲೀಕರಣವನ್ನು ಬಲಪಡಿಸುತ್ತದೆ ಮತ್ತು “ರಾಜ್ಯದ ಅಸಾಧಾರಣ ಸಾಂಸ್ಕೃತಿಕ-ಆಧ್ಯಾತ್ಮಿಕ ಗುರುತು ಮತ್ತು ಪರಿಸರವನ್ನು” ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ನಾನು ಮಾಡಲಿರುವ ಘೋಷಣೆಯು ನನ್ನ ಪಕ್ಷದ ನಿರ್ಣಯವಾಗಿದ್ದು, ಹೊಸ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ಈ ಘೋಷಣೆ ನಿಜವಾಗಲಿದೆ. ದೇವಭೂಮಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅಖಂಡವಾಗಿ ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ, ಇದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಧಾಮಿ ಹೇಳಿದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಧಾಮಿಯವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.