ಚಲಿಸುತ್ತಿರುವ ರೈಲಿನಲ್ಲಿ ಹತ್ತುವಾಗಲೇ ಆಗಿತ್ತು ಎಡವಟ್ಟು; ಆಪತ್ಬಾಂಧವನಾಗಿ ಬಂದ ಆರ್.ಪಿ.ಎಫ್. ಪೇದೆ 06-01-2023 11:58AM IST / No Comments / Posted In: Latest News, India, Live News ಕೆಲವರಿಗೆ ಅದೇನು ಅವಸರ ಇರುತ್ತೋ ಏನೋ ಗೊತ್ತಿಲ್ಲ. ಅಪಾಯ ಇದೆ ಅಂತ ಗೊತ್ತಿದ್ದರೂ ಕೆಲ ತಪ್ಪುಗಳನ್ನ ಮಾಡುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಜೀವಕ್ಕೇನೂ ಆಗಿರುವುದಿಲ್ಲ, ಇಲ್ಲಾ ಅಂದ್ರೆ ಸಾವು ಫಿಕ್ಸ್ ಆಗಿರುತ್ತೆ. ಅಷ್ಟಕ್ಕೂ ಈಗ ಅಂತಹದ್ದೇನು ಆಯ್ತು ಅಂತಿರಾ! ಈ ವಿಡಿಯೋ ನೋಡಿ. ಇಲ್ಲಿ ರೈಲು ಚಲಿಸುತ್ತಿರುವಾಗಲೇ ಕೆಲ ಪ್ರಯಾಣಿಕರು, ರೈಲು ಹತ್ತುವುದಕ್ಕೆ ನೋಡುತ್ತಾರೆ. ಆದರೆ ಆಯತಪ್ಪಿ ಅದೇ ರೈಲು ಅವರನ್ನ ಎಳೆದುಕೊಂಡು ಹೋಗುತ್ತೆ. ಅದೇ ಸಮಯದಲ್ಲಿ ಅಲ್ಲೇ ಇದ್ದ ಆರ್ಪಿಎಫ್ ಯೋಧ ತಕ್ಷಣವೇ ಓಡಿ ಹೋಗಿ ಆತನನ್ನ ಫ್ಲಾಟ್‌ಫಾರ್ಮ್‌ನತ್ತ ಎಳೆಯುತ್ತಾರೆ. ಹಾಗೇನಾದರೂ ಮಾಡದೇ ಇದ್ದಲ್ಲಿ ಆ ವ್ಯಕ್ತಿ ಅದೇ ರೈಲಿನ ಚಕ್ರದಡಿಗೆ ಸಿಕ್ಕಾಕಿಕೊಂಡು ಸತ್ತೇ ಹೋಗುತ್ತಿದ್ದ. ಈ ಘಟನೆ ಬಿಹಾರ್‌ನ ಪುರ್ನಿಯಾದಲ್ಲಿ ನಡೆದಿದೆ. ಈ ರೀತಿಯ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತೆ. ಇದರ ಕುರಿತು ರೈಲ್ವೆ ಇಲಾಖೆ ಅನೇಕ ಕ್ರಮಗಳನ್ನ ಕೈಗೊಂಡರೂ ಜನರು ಮೈ ಮರೆತು ಚಲಿಸುತ್ತಿರುವ ರೈಲಿನಲ್ಲಿ ಹತ್ತುವುದು ಇಲ್ಲಾ ಇಳಿಯುವುದಕ್ಕೆ ಮುಂದಾಗುತ್ತಾರೆ. ಈಗ ಈ ಘಟನೆಯ 20 ಸೆಕೆಂಡ್ ವಿಡಿಯೋವನ್ನ ರೈಲ್ವೆ ಸಚಿವಾಲಯ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡಿದೆ. ಮತ್ತು ಶೀರ್ಷಿಕೆಯಲ್ಲಿ “ ಈ ಘಟನೆ ಬಿಹಾರ್‌ನ ಪುರ್ನಿಯಾದಲ್ಲಿ ನಡೆದಿರುವುದು. ಪ್ರಯಾಣಿಕರು ನಿರ್ಲಕ್ಷ್ಯ ವಹಿಸಿದ್ದಲ್ಲಿ ಎಂತಹ ಅಪಾಯ ಎದುರಾಗುತ್ತೆ ಅನ್ನೊದಕ್ಕೆ ಇದು ಸಾಕ್ಷಿಯಾಗಿದೆ. ಆದ್ದರಿಂದ ಚಲಿಸುತ್ತಿರುವ ರೈಲಿನಲ್ಲಿ ಹತ್ತುವ ಇಲ್ಲಾ, ಇಳಿಯುವ ಸಾಹಸಕ್ಕೆ ಮುಂದಾಗಬೇಡಿ“ ಎಂದು ಬರೆದಿದ್ದಾರೆ. ಈ ವೀಡಿಯೋ ನೋಡಿ ಅನೇಕರು ಆರ್‌ಪಿಎಫ್ ಸಮಯಪ್ರಜ್ಞೆ ನೋಡಿ ದಂಗಾಗಿದ್ದಾರೆ. ಈ ರೀತಿಯ ಘಟನೆ ಇದೇ ಮೊದಲ ಬಾರಿ ನಡೆದಿರೋದಲ್ಲ. ಈ ಹಿಂದೆಯೂ ನಡೆದಿದೆ. ಆ ಸಮಯದಲ್ಲೆಲ್ಲ ಆರ್‌ಪಿಎಫ್ ಯೋಧರು ಆಪತ್ಬಾಂಧವರಂಗೆ ಬಂದು ಅನೇಕರನ್ನ ಜೀವಾಪಾಯದಿಂದ ರಕ್ಷಿಸಿದ್ದಾರೆ ಎಂದು ಅನೇಕರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. बिहार के पूर्णिया में सतर्क आरपीएफ जवान ने चलती ट्रेन में चढ़ने के दौरान हादसे का शिकार हुए यात्री को बचाया। कृपया चलती ट्रेन में चढ़ने/उतरने का प्रयास ना करें। pic.twitter.com/2OWWQRqNae — Ministry of Railways (@RailMinIndia) January 4, 2023