ಇದು ಮದುವೆ ಸೀಸನ್ ಆಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಸಮಾರಂಭದ ಕೆಲವೊಂದು ವಿಶೇಷ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವಧು-ವರ ಡಾನ್ಸ್ ಮಾಡುವುದಾಗಿರಬಹುದು ಅಥವಾ ಮದುವೆ ವೇಳೆ ಎಡವಟ್ಟಾದ ಪ್ರಸಂಗಗಳಿರಬಹುದು ಇಂತಹ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ.
ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ತನ್ನ ಜೀವನದ ಪ್ರಮುಖ ದಿನವಾದ ಮದುವೆ ಸಮಾರಂಭದಲ್ಲೇ ವರನೊಬ್ಬ ತಾನು ಮಾಡುತ್ತಿದ್ದ ವ್ಯವಹಾರವನ್ನು ಮೊಬೈಲ್ ನಲ್ಲಿ ವೀಕ್ಷಿಸುವುದರಲ್ಲಿ ತಲ್ಲೀನನಾಗಿದ್ದಾನೆ.
ವ್ಯಾಪಕವಾಗಿ ಹಂಚಿಕೊಂಡ ವೀಡಿಯೊದಲ್ಲಿ ಶೇರ್ವಾನಿ ಧರಿಸಿ ವರ ಕುಳಿತಿರುವಾಗ ಅವನ ಕಣ್ಣುಗಳು ಸೆಲ್ ಫೋನ್ ಮೇಲೆ ನೆಟ್ಟಿರುತ್ತವೆ. ವರನು ಮದುವೆಗಿಂತ ತನ್ನ ವ್ಯಾಪಾರದ ಡ್ಯಾಶ್‌ಬೋರ್ಡ್ ಮೇಲೆ ಹೆಚ್ಚು ಗಮನಹರಿಸಿದ್ದಾನೆ.
ವೀಡಿಯೊವನ್ನು ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದ್ದು ಮತ್ತು ವರನ ಫೋನ್ ಪರದೆಯ ಮೇಲೆ ಜೂಮ್ ಮಾಡಿದಾಗ, ಅವನ ನೋಟ ಷೇರು ಮಾರುಕಟ್ಟೆಯ ಏರಿಳಿತದ ಮೇಲೆ ಕೇಂದ್ರೀಕೃತವಾಗಿರುವುದನ್ನು ತೋರಿಸುತ್ತದೆ.