ಯುಎಸ್ನ ವಿವಿಧ ಭಾಗಗಳಲ್ಲಿ ವಾಸಿಸುವ ಜನರು, ಕಾಡು ಪ್ರಾಣಿಗಳನ್ನು ಎದುರಿಸುವುದು ಸಾಮಾನ್ಯ ಸಂಗತಿಯಲ್ಲ. ನ್ಯೂಜೆರ್ಸಿಯ ಏಕಾಂತ ಪ್ರದೇಶದಲ್ಲಿ ವಾಸಿಸುವ ಮಹಿಳೆಯೊಬ್ಬರು ಕರಡಿಯೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಅಷ್ಟೇ ಅಲ್ಲ ಮಹಿಳೆ ಹೇಳಿದ ಕೆಲಸವನ್ನು ಕರಡಿ ಚಾಚೂತಪ್ಪದೆ ಮಾಡಿದೆ.
ಹೌದು, ವೆರ್ನಾನ್ ನಿವಾಸಿಯಾಗಿರುವ ಸುಸಾನ್ ಕೆಹೋ ಎಂಬಾಕೆ ತನ್ನ ಮನೆಯ ಹೊರಗಿನಿಂದ ಕೆಲವು ವಿಚಿತ್ರ ಶಬ್ಧಗಳನ್ನು ಕೇಳಿದ್ದಾಳೆ. ಮಳೆ ಏನಾದ್ರೂ ಬರುತ್ತಿದೆಯಾ ಎಂದು ಪರೀಕ್ಷಿಸಲು ಮುಂದಾಗಿ, ಬಾಗಿಲು ತೆರೆದಿದ್ದಾಳೆ. ಈ ವೇಳೆ ಬಾಗಿಲಿನ ಬಳಿ ಕರಡಿ ಬಂದು ನಿಂತಿರುವುದನ್ನು ಗಮನಿಸಿದ್ದಾಳೆ.
’ಜೀವನದಲ್ಲಿ ಎಂದೂ ಮದ್ಯಪಾನ ಮಾಡೋದಿಲ್ಲ’: ಬಿಹಾರ ಪೊಲೀಸ್ ವರಿಷ್ಠರಿಂದ ಪ್ರಮಾಣವಚನ
ಬಾಗಿಲ ಬಳಿಯೇ ಕರಡಿ ಇದ್ದರೂ ಕೂಡ ಈಕೆ ಬೆಚ್ಚಿ ಬಿದ್ದಿಲ್ಲ. ಬಾಗಿಲನ್ನು ಸಂಪೂರ್ಣ ತೆರೆದಿಟ್ಟ ಈಕೆ, ಓ.. ಮಿಸ್ಟರ್ ಕರಡಿ, ದಯವಿಟ್ಟು ಬಾಗಿಲು ಮುಚ್ಚುವಿರಾ ಅಂತಾ ಕರಡಿಯನ್ನು ಕೇಳಿಕೊಂಡಿದ್ದಾಳೆ. ಆಶ್ಚರ್ಯ ಎಂಬಂತೆ ಕರಡಿಯು ಬಾಗಿಲನ್ನು ತನ್ನ ಬಾಯಿಯ ಸಹಾಯದಿಂದ ಎಳೆದು ಮುಚ್ಚಿ ಬಿಟ್ಟಿದೆ.
ಕರಡಿಗಳು ಕೂಡ ಬಹಳ ಸ್ಮಾರ್ಟ್ ಆಗಿದ್ದಾವೆ ಎಂದು ಈಕೆ ವಿಡಿಯೋವನ್ನು ಹಂಚಿಕೊಳ್ಳುತ್ತಾ ಹೇಳಿದ್ದಾಳೆ. ತನ್ನ ಮನೆಯ ಮುಂಭಾಗದ ಬಾಗಿಲನ್ನು ಹೇಗೆ ಮುಚ್ಚುವುದು ಎಂಬುದನ್ನು ಈ ಕರಡಿ ಕಲಿತುಕೊಂಡಿದೆ ಎಂದು ಯೂಟ್ಯೂಬ್ನಲ್ಲಿ ಬರೆದಿದ್ದಾಳೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ.