alex Certify ಕಾರ್ತಿಕ ಹುಣ್ಣಿಮೆಯ ದಿನ ದೀಪದಾನ, ದೀಪ ಪೂಜೆಗಿದೆ ʼಮಹತ್ವʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತಿಕ ಹುಣ್ಣಿಮೆಯ ದಿನ ದೀಪದಾನ, ದೀಪ ಪೂಜೆಗಿದೆ ʼಮಹತ್ವʼ

 

ಕಾರ್ತಿಕ ಹುಣ್ಣಿಮೆ ದಿನ ದೀಪ ದಾನ, ಸ್ನಾನ, ಭಜನೆ, ಆರತಿ, ದಾನಕ್ಕೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಹಾಗೂ ಲಕ್ಷ್ಮಿಯನ್ನು ಶಾಸ್ತ್ರಗಳಂತೆ ಪೂಜೆ ಮಾಡುವುದ್ರಿಂದ ಸುಖ, ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಈ ದಿನ ವಿಶೇಷ ಪೂಜೆ, ಭಜನೆ, ಕೀರ್ತನೆ, ದಾನವನ್ನು ಮಾಡಲಾಗುತ್ತದೆ.

  ಕಾರ್ತಿಕ ಮಾಸದಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ. ಕತ್ತಲನ್ನು ಹೋಗಲಾಡಿಸಿ ಬೆಳಕು ನೀಡುವ ಸಂಕೇತ ದೀಪ. ಹಾಗಾಗಿಯೇ ಕಾರ್ತಿಕ ಮಾಸದಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಕಾರ್ತಿಕ ಮಾಸದ ಪ್ರತಿಯೊಂದು ದಿನ ಮನೆಯ ಮುಖ್ಯದ್ವಾರ, ತುಳಸಿ, ದೇವರ ಮುಂದೆ ದೀಪ ಬೆಳಗಲಾಗುತ್ತದೆ. ಕಾರ್ತಿಕ ಮಾಸದಲ್ಲಿ ದಾನ, ಪವಿತ್ರ ನದಿಯಲ್ಲಿ ಸ್ನಾನ, ಪೂಜೆ ಮಾಡಬೇಕೆಂಬ ನಂಬಿಕೆಯಿದೆ. ಕಾರ್ತಿಕ ಮಾಸದಲ್ಲಿ ಯಾವುದೇ ಶುಭ ಕೆಲಸ ಮಾಡದೆ ಹೋದಲ್ಲಿ ನವೆಂಬರ್ 23 ರಂದು ಅವಶ್ಯಕವಾಗಿ ಈ ಕೆಲಸವನ್ನು ಮಾಡಿ.

ಸಾಧ್ಯವಾದ್ರೆ ಕಾರ್ತಿಕ ಹುಣ್ಣಿಮೆ ದಿನ ಗಂಗಾನದಿಯಲ್ಲಿ ಸ್ನಾನ ಮಾಡಿ. ಇಲ್ಲವಾದ್ರೆ ಸ್ನಾನ ಮಾಡಿ 11 ದೀಪಗಳ ದಾನ ಮಾಡಿ. ಇದನ್ನು ನೀವು ಸಂಜೆ ಮಾಡಬೇಕು. ದೀಪ ದಾನ ಮಾಡಿ ಪೂಜೆ, ಅರ್ಚನೆ ನಂತ್ರ ದೇವಸ್ಥಾನದಿಂದ ಮನೆಗೆ ಬರುವ ನೀವು ತುಳಸಿ ಗಿಡ, ದೇವರ ಮನೆ ಹಾಗೂ ಮುಖ್ಯ ದ್ವಾರದ ಮುಂದೆ ತುಪ್ಪದ ದೀಪ ಹಚ್ಚಿ.

ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿ ಒಲಿಸಿಕೊಳ್ಳಲು ಈ ಉಪಾಯವನ್ನು ಮಾಡಬಹುದು. ದೇವಸ್ಥಾನಕ್ಕೆ ಹೋಗಿ ನಿಮ್ಮ ನೆಚ್ಚಿನ ದೇವರ ಭಜನೆ ಮಾಡ್ತಾ ದೀಪದ ಆರತಿ ಎತ್ತಿ. ನಂತ್ರ ಒಂದು ದೀಪವನ್ನು ದೇವಸ್ಥಾನದ ಮುಂದಿರುವ ಅಶ್ವತ್ಥ ಮರದ ಕೆಳಗೆ ಇಡಿ. ನಂತ್ರ ಬಡವರಿಗೆ ಹಣ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ದಾನರೂಪದಲ್ಲಿ ನೀಡಿ.

ಮೂರನೇ ಉಪಾಯವನ್ನು ನೀವು ಮನೆಯಲ್ಲಿಯೇ ಮಾಡಬಹುದು. ಮನೆಯಲ್ಲಿ 11 ದೀಪವನ್ನು ಹಚ್ಚಿ. ಮೊದಲ ದೀಪವನ್ನು ತುಳಸಿ ಗಿಡದ ಬಳಿ ಇಡಿ. ಇನ್ನೊಂದು ದೀಪವನ್ನು ಮುಖ್ಯ ದ್ವಾರದ ಬಳಿ ಇಡಿ. ಉಳಿದ 9 ದೀಪವನ್ನು ದೇವರ ಮನೆಯಲ್ಲಿ ಇಡಿ. ವಿಷ್ಣು ಸಾಲಿಗ್ರಾಂ ಅಥವಾ ಲಕ್ಷ್ಮಿ ಚಾಲೀಸ್ ಓದಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...