ನರಕ ಚತುರ್ದಶಿಯ ಎರಡನೇ ದಿನ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿ ಪೂಜೆಯನ್ನು ಭಕ್ತರು ಈ ದಿನ ಮಾಡ್ತಾರೆ. ನರಕ ಚತುರ್ದಶಿಯಂದು ಮನೆಗೆ ಬರುವ ಬಲೀಂದ್ರನನ್ನು ಮೂರು ದಿನ ಪೂಜೆ ಮಾಡಿ ಬಲಿ ಪಾಡ್ಯಮಿಯಂದು ಕಳುಹಿಸಲಾಗುತ್ತದೆ.
ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಬಲಿಪಾಡ್ಯಮಿ ಆಚರಿಸಲಾಗುತ್ತದೆ. ನೆಲದ ಮೇಲೆ ಬಲೀಂದ್ರದ ಚಿತ್ರ ಬಿಡಿಸಿ ಪೂಜೆ ಮಾಡುವವರೂ ಇದ್ದಾರೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸಿಹಿ ತಿಂಡಿ ಮಾಡಿ, ಮನೆ ತುಂಬ ದೀಪ ಬೆಳಗಿ ಬಲಿ ಚಕ್ರವರ್ತಿ ಪೂಜೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಹೊಸ ಬಟ್ಟೆಯನ್ನು ಧರಿಸಿ ಎಲ್ಲರೂ ಖುಷಿಯಿಂದ ಹಬ್ಬ ಆಚರಿಸುತ್ತಾರೆ.