ಬಳ್ಳಾರಿ : ಮಗನ ಹುಟ್ಟುಹಬ್ಬದ ದಿನವೇ ತಂದೆ ಎದೆಗೆ ಚಾಕು ಇರಿದು ದುಷ್ಕರ್ಮಿಯೋರ್ವ ಬರ್ಬರ ಹತ್ಯೆ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ, ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಷಾ ಎದೆಗೆ ಚಾಕು ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸಾನಿಯಾ ನಿಜಾಮ್ ಎಂಬ 6 ವರ್ಷದ ಮಗನ ಹುಟ್ಟು ಹಬ್ಬಕ್ಕೆ ತಂದೆ ಎಲ್ಲಾ ತಯಾರಿ ಮಾಡಿಕೊಂಡಿದ್ದನು. ಇನ್ನೇನು ಕೇಕ್ ಕತ್ತರಿಸಬೇಕು ಎಂಬ ಹೊತ್ತಿಗೆ ಮನೆ ಹೊರಗೆ ಬಂದಿದ್ದ ವೇಳೆಯಲ್ಲಿ ಭಾಷಾನನ್ನು ಕೊಲೆ ಮಾಡಲಾಗಿದೆ. ಹತ್ಯೆಯಾದ ಭಾಷಾ ಕೆ ಆರ್ ಪಿಪಿ ಕಾರ್ಯಕರ್ತನಾಗಿದ್ದನು. ಈ ಸಂಬಂಧ ಕೋಳಿ ಅನ್ವರ್, ಅಲ್ತಾಫ್, ಸಿರಾಜ್ ಎಂಬುವವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.