ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ಚಿರಪರಿಚಿತ ಹೆಸರು. ಅದ್ಭುತವಾಗಿ ಕಟ್ಟಿಕೊಡುವ ಚಿತ್ರಗಳ ಮೂಲಕ ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿರುವ ಸ್ಟೀವನ್ ಸ್ಪೀಲ್ಬರ್ಗ್ 75ನೇ ಜನ್ಮದಿನದಂದು ಅವರ ನಿರ್ದೇಶನದ ಪ್ರಚಂಡ್ ಹಿಟ್ ಚಿತ್ರಗಳನ್ನು ಒಂದಷ್ಟು ಮೆಲುಕು ಹಾಕೋಣ.
ಶಿಂಡ್ಲರ್ಸ್ ಲಿಸ್ಟ್
1993ರ ಈ ಐತಿಹಾಸಿಕ ಸಿನಿಮಾದಲ್ಲಿ ಲಿಯಾಮ್ ನೀಸನ್, ರಾಲ್ಫ್ ಫೈನೆಸ್ ಮತ್ತು ಬೆನ್ ಕಿಂಗ್ಸ್‌ಲೇ ತಾರಾಗಣದಲ್ಲಿದ್ದರು. ನಾಜ಼ಿ ಜರ್ಮನಿ ಕಾಲದ ಕರಾಳ ಇತಿಹಾಸವಾದ ಹೋಲೋಕಾಸ್ಟ್‌ನ ಅಧ್ಯಾಯಗಳನ್ನು ಸ್ಟೀವನ್ ಸ್ಪೀಲ್ಬರ್ಗ್ ಈ ಚಿತ್ರದಲ್ಲಿ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. 1994ರ ಅಕಾಡೆಮಿ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ ಬಾಫ್ಟಾದ ಅತ್ಯುತ್ತಮ ಚಿತ್ರ ಪ್ರಶಸ್ತಿಗೂ ಭಾಜನವಾಗಿತ್ತು.
ಮಹಿಳೆ ಕೈಯಲ್ಲಿದ್ದ ಐಸ್‌ಕ್ರೀಂ ಅನ್ನು ಮೊಬೈಲ್ ಎಂದು ಭಾವಿಸಿ ದಂಡ ಹಾಕಿದ ಪೊಲೀಸ್
ಸೇವಿಂಗ್ ಪ್ರೈವೇಟ್ ರ‍್ಯಾನ್
ಯುದ್ಧ ನಾಟಕಗಳ ಕುರಿತಂತೆ ಯಾರಾದರೂ ಮಾತನಾಡಿದರೆ 1998ರ ಈ ಚಿತ್ರ ಮಾತಿಗೆ ಬರುತ್ತದೆ. ಟಾಮ್ ಹಾಂಕ್ಸ್ ಮತ್ತು ಮ್ಯಾಟ್ ಡಾಮನ್ ತಾರಾಗಣದ ಈ ಚಿತ್ರದಲ್ಲಿ ಅಮೆರಿಕನ್ ಯೋಧರ ಸಮೂಹವೊಂದು ಯುದ್ಧದಲ್ಲಿ ತನ್ನ ಮೂರೂ ಸಹೋದರರನ್ನು ಕಳೆದುಕೊಂಡ ’ರ‍್ಯಾನ್’ನ ರಕ್ಷಣೆಗೆ ಮುಂದಾಗುವ ಕಥಾ ಹಂದರವನ್ನು ಹೊಂದಿದೆ. ಅನೇಕ ಅಕಾಡೆಮಿ ಪ್ರಶಸ್ತಿಗಳನ್ನು ಜಯಿಸಿದ ಚಿತ್ರ 1999ರಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೂ ಭಾಜನವಾಗಿತ್ತು.
ಜುರಾಸಿಕ್ ಪಾರ್ಕ್
ಚಿತ್ರ ನಿರ್ದೇಶನದಲ್ಲಿ ತಮ್ಮ ವೈವಿಧ್ಯತೆಯನ್ನು ಸಾಬೀತುಪಡಿಸಿದ ಸ್ಟೀವನ್ ಸ್ಪೀಲ್ಬರ್ಗ್, 1993ರ ಸೈ-ಫೈ ಚಿತ್ರ ಜುರಾಸಿಕ್ ಪಾರ್ಕ್ ಮೂಲಕ ಎಲ್ಲಾ ವಯೋಮಾನದ ಜನರಿಗೂ ಆಪ್ತವಾಗಿಬಿಟ್ಟರು. ಈ ಚಿತ್ರವೂ ಸಹ ಶ್ರೇಷ್ಠ ವಿಶ್ಯುವಲ್ ಪ್ರಭಾವ, ಸೌಂಡ್ ಮಿಕ್ಸಿಂಗ್, ಸೌಂಡ್ ಎಡಿಟಿಂಗ್ ಹಾಗೂ ಇನ್ನಿತರ ವರ್ಗಗಳಲ್ಲಿ 1994ರ ಅಕಾಡೆಮಿ ಪ್ರಶಸ್ತಿಗಳನ್ನು ಬುಟ್ಟಿಗಿಳಿಸಿಕೊಂಡಿತ್ತು.
ಜಾಸ್
ನಿಮ್ಮನ್ನು ಆಸನದ ತುದಿಯಲ್ಲಿ ಕುಳ್ಳಿರಿಸುವ ಚಿತ್ರಗಳಲ್ಲಿ ಒಂದಾದ ಜಾಸ್, 1975ರ ಸಾಹಸ ಥ್ರಿಲ್ಲರ್ ಆಗಿದ್ದು, ಇಂದಿಗೂ ಸಹ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಚಿತ್ರಕ್ಕೆ ಧ್ವನಿ, ಸಂಗೀತ ಹಾಗೂ ಚಿತ್ರ ಸಂಪಾದನೆ ವರ್ಗಗಳಲ್ಲಿ 1976ರ ಅಕಾಡೆಮಿ ಪ್ರಶಸ್ತಿಗಳು ಒಲಿದಿದ್ದವು.
ಮ್ಯೂನಿಕ್
ಎರಿಕ್ ಬಾನಾ, ಡೇನಿಯಲ್ ಕ್ರೇಗ್ ಮತ್ತು ಮೇರಿ ಯೋಸೀ ಕ್ರೋಜ಼್‌ರನ್ನು ಒಳಗೊಂಡ ಮ್ಯೂನಿಕ್ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದಲ್ಲಿ ಮೂಡಿಬಂದ ಕರಾಳ ಅಧ್ಯಾಯವೊಂದರ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರಕ್ಕೆ ವರ್ಷದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ನಿರ್ದೇಶನ ಶ್ರೇಷ್ಠ ಸಾಧನೆ ಹಾಗೂ ಶ್ರೇಷ್ಠ ಬರಹ ಸೇರಿದಂತೆ ಅನೇಕ ಗೌರವಗಳು ಒಲಿದಿದ್ದವು.