
ಕೋವಿಡ್ ಎರಡನೇ ಅಲೆಯಲ್ಲಿ ದೇಶಾದ್ಯಂತ ಆಕ್ಸಿಜನ್ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಅನೇಕ ಆಸ್ಪತ್ರೆಗಳು ಆಕ್ಸಿಜನ್ ವ್ಯವಸ್ಥೆ ಮಾಡಲಾಗದೆ ಪರದಾಡಿದವು. ದೇಶದ ವಿವಿಧ ಕಡೆ ಹಲವು ಸಾವು-ನೋವು ಕೂಡ ಇದೇ ಕಾರಣದಿಂದ ಆಯಿತು.
ಆದರೆ ಈಗ, ಆಮ್ಲಜನಕದ ಕೊರತೆಯಿಂದಾಗಿನ ಸಾವುಗಳ ಬಗ್ಗೆ ಮಾಹಿತಿ ಕೊರತೆಯಿದೆ ಎಂಬ ಕೇಂದ್ರದ ಹೇಳಿಕೆಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆದಿದೆ.
ಪ್ರಮುಖ ಕಾಂಗ್ರೆಸ್ ನಾಯಕರು ಸರ್ಕಾರವನ್ನು ಹಿಗ್ಗಾಮುಗ್ಗ ಟೀಕಿಸಿದರು. ಈ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತೀಕಾರ ಎಂಬಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಇಟಾಲಿಯನ್ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾರೆ.
ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, ಸರ್ಕಾರದ ಪ್ರತಿಕ್ರಿಯೆಯ ಕುರಿತ ಸುದ್ದಿಗಳನ್ನು ಟ್ಯಾಗ್ ಮಾಡಿದ್ದಾರೆ. ಇದು ಕೇವಲ ಆಮ್ಲಜನಕದ ಕೊರತೆಯಾಗಿರಲಿಲ್ಲ. ಸೂಕ್ಷ್ಮತೆ ಮತ್ತು ಸತ್ಯದ ತೀವ್ರ ಕೊರತೆ ಇತ್ತು – ಆಗ ಮತ್ತು ಈಗ ಎಂದು ಟೀಕಿಸಿದ್ದರು.
BIG NEWS: ಸಿಎಂ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಪ್ರಸ್ತಾಪಿಸಿದ ಶಾಂತವೀರ ಸ್ವಾಮೀಜಿ
ಈ ಟೀಕೆಗೆ ಇಟಾಲಿಯನ್ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ, ನಾನು ಈ ರಾಜಕುಮಾರನ ಬಗ್ಗೆ ಹೇಳುತ್ತೇನೆ: ಅವನಿಗೆ ಆಗ ಮೆದುಳಿನ ಕೊರತೆ ಇತ್ತು, ಈಗಲೂ ಇದೆ, ಶಾಶ್ವತವಾಗಿರುತ್ತದೆ ಎಂದು ತಿವಿದಿದ್ದಾರೆ.
ಆಮ್ಲಜನಕದಿಂದ ಮೃತಪಟ್ಟವರ ಮಾಹಿತಿ ಪಟ್ಟಿಯನ್ನು ರಾಜ್ಯಗಳು ಸಂಗ್ರಹಿಸಿವೆ. ಪರಿಷ್ಕರಿಸಿದ ಪಟ್ಟಿಗಳನ್ನು ಸಲ್ಲಿಸಲು ನಿಮ್ಮ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಿಗೆ ನೀವು ಹೇಳಬಹುದು. ಅಲ್ಲಿಯವರೆಗೆ ಸುಳ್ಳು ಹೇಳುವುದು ನಿಲ್ಲಿಸಿ ಎಂದು ಕುಟುಕಿದ್ದಾರೆ.
ಈ ಮುನ್ನ ಕೈ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯಸಭೆಯಲ್ಲಿ ಈ ವಿಚಾರದಲ್ಲಿ ಪ್ರಶ್ನೆ ಹಾಕಿದ್ದರು. ಈ ವೇಳೆ ಆರೋಗ್ಯ ಸಚಿವರು ನೀಡಿದ ಉತ್ತರ ತಪ್ಪು ಮಾಹಿತಿಯಿಂದ ಕೂಡಿದೆ, ಇದರ ವಿರುದ್ಧ ತಾವು ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದರು.