ನವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ.
ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ:
1 ಕೆ.ಜಿ ಸಕ್ಕರೆ
½ ಲೀಟರ್ ಹಾಲು
1 ಚಮಚ ಕೇಸರಿ ಬಣ್ಣ
ಸಕ್ಕರೆ ಅಚ್ಚು ಮಾಡುವ ವಿಧಾನ : ಒಂದು ಪಾತ್ರೆಗೆ ಸಕ್ಕರೆ, ನೀರು ಹಾಗೂ ಹಾಲನ್ನು ಹಾಕಿ ಕುದಿಸಿ. ಸಕ್ಕರೆ ಕರಗಿದ ಮೇಲೆ ಈ ಮಿಶ್ರಣವನ್ನು ಶೋಧಿಸಿ. ನಂತ್ರ ಬಂದ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿ ಕುದಿಸಿ.
ಪಾಕ ಬರ್ತಾ ಇದ್ದಂತೆ ಕೇಸರಿ ಬಣ್ಣ ಸೇರಿಸಿ. ನಂತ್ರ ಅಚ್ಚಿಗೆ ಈ ಮಿಶ್ರಣವನ್ನು ಹಾಕಿಡಿ. ತಣ್ಣಗಾದ ಮೇಲೆ ಅಚ್ಚಿನಿಂದ ನಿಧಾನವಾಗಿ ಸಕ್ಕರೆ ಅಚ್ಚನ್ನು ತೆಗೆಯಿರಿ.