ಇಂದೋರ್: ವಿದ್ಯಾರ್ಥಿನಿಗೆ ವಂಚಿಸಿದ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಮತ್ತು ಬೈಜೂಸ್ ಸಂಸ್ಥೆಗೆ ಸ್ಥಳೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.
ಐಎಎಸ್ ಕೋಚಿಂಗ್ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿನಿ ಪ್ರಿಯಾಂಕಾ ದೀಕ್ಷಿತ್ ಆನ್ಲೈನ್ ನಲ್ಲಿ ನಟ ಶಾರುಖ್ ಖಾನ್ ಅವರ ಬೈಜೂಸ್ ಪರ ಜಾಹೀರಾತುಗಳಿಂದ ಪ್ರೇರಿತಗೊಂಡು ಕೋಚಿಂಗ್ ಪಡೆಯಲು ಶುಲ್ಕ ಪಾವತಿಸಿದ್ದರು. ಉತ್ತಮ ತರಬೇತಿ ನೀಡುವುದಾಗಿ ನಂಬಿಸಿದ್ದ ಸಂಸ್ಥೆ ಯಾವ ತರಗತಿಗಳನ್ನು ನೀಡದೇ, ಹಣ ವಾಪಸ್ ಕೊಡದೆ ವಂಚಿಸಿದೆ ಎಂದು ಪ್ರಿಯಾಂಕಾ ದೀಕ್ಷಿತ್ ಇಂದೋರ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಆಯೋಗ ಪ್ರಿಯಾಂಕಾ ದೀಕ್ಷಿತ್ ಪಾವತಿಸಿದ 1.08 ಲಕ್ಷ ರೂ.ಗಳನ್ನು ವಾರ್ಷಿಕ ಶೇಕಡ 12ರಷ್ಟು ಬಡ್ಡಿ ಸೇರಿ ಮರಳಿಸಬೇಕು ಎಂದು ಸೂಚಿಸಿದೆ. ದಾವೆ ವೆಚ್ಚವಾಗಿ 5000 ರೂ., ಆಕೆಯ ಮಾನಸಿಕ, ಆರ್ಥಿಕ ಸಂಕಷ್ಟ ಪರಿಹಾರಕ್ಕೆ 50,000 ರೂಪಾಯಿ ಪರಿಹಾರವನ್ನು ಶಾರುಖ್ ಖಾನ್ ಮತ್ತು ಬೈಜೂಸ್ ಸಂಸ್ಥೆ ಸಮಾನವಾಗಿ ಪಾವತಿಸುವಂತೆ ಆದೇಶ ನೀಡಲಾಗಿದೆ.