alex Certify ರಾಖಿ ಕಟ್ಟಿಸಿಕೊಳ್ಳಲು ಹೊರಟಿದ್ದಾಗಲೇ ಅವಘಡ; ಚೈನಾ ಮಾಂಜಾದಿಂದ ಗಂಟಲು ಸೀಳಿ ವ್ಯಕ್ತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಖಿ ಕಟ್ಟಿಸಿಕೊಳ್ಳಲು ಹೊರಟಿದ್ದಾಗಲೇ ಅವಘಡ; ಚೈನಾ ಮಾಂಜಾದಿಂದ ಗಂಟಲು ಸೀಳಿ ವ್ಯಕ್ತಿ ಸಾವು

ರಕ್ಷ ಬಂಧನದ ದಿನ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳಲು ಹೊರಟಿದ್ದ ವ್ಯಕ್ತಿಯೊಬ್ಬರು ಚೈನಾ ಮಾಂಜಾದಿಂದ ಜೀವ ಕಳೆದುಕೊಂಡ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ.

ಚೈನಾ ಮಾಂಜಾ ಬಳಕೆ ನಿಷೇಧದ ಹೊರತಾಗಿಯೂ ಬಳಕೆ ಮುಂದುವರಿದಿರುವುದು ಈ ಘಟನೆಯಿಂದ ಬಹಿರಂಗವಾಗಿದೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್​ ಪ್ರದೇಶದಲ್ಲಿ 34 ವರ್ಷದ ವ್ಯಕ್ತಿ ತನ್ನ ಸಂಬಂಧಿಯ ಮನೆಯಲ್ಲಿ ರಕ್ಷಾ ಬಂಧನವನ್ನು ಆಚರಿಸಲು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮುಂಡ್ಕಾದ ರಾಜಧಾನಿ ಪಾರ್ಕ್​ನ ನಿವಾಸಿ ವಿಪಿನ್​ ಕುಮಾರ್​ ಎಂಬಾತ ತನ್ನ ಪತ್ನಿ ಮತ್ತು ಮಗಳೊಂದಿಗೆ ಮೋಟಾರ್​ ಸೈಕಲ್​ನಲ್ಲಿ ಹೋಗುತ್ತಿದ್ದಾಗ ಚೈನಾ ಮಾಂಜಾದಿಂದ ಗಾಯಗೊಂಡಿದ್ದಾರೆ. ಅವರು ಶಾಸ್ತ್ರಿ ಪಾರ್ಕ್​ ಫ್ಲೈಓವರ್​ ಅನ್ನು ತಲುಪಿದಾಗ ಚೈನಾ ಮಾಂಜಾ ಅವರ ಕುತ್ತಿಗೆಯಲ್ಲಿ ಸಿಲುಕಿಕೊಂಡು, ಗಾಯಗೊಂಡರು.

ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತರಾದರೆಂದು ಘೋಷಿಸಲಾಯಿತು. ಕುತ್ತಿಗೆಗೆ ಆಳವಾದ ಗಾಯವಾಗಿತ್ತು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ವಿಪಿನ್​ ಬ್ರೆಡ್​ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದರು.

ಕುಖ್ಯಾತವಾಗಿರುವ ಚೈನಾ ದಾರವನ್ನು 2017ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ) ನಿಷೇಧಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...