alex Certify ಫೌಂಟೇನ್ ಪೆನ್ ಡೇ ಪ್ರಯುಕ್ತ ಭಿನ್ನ-ವಿಭಿನ್ನ ಪೆನ್ನುಗಳ ಪ್ರದರ್ಶನ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೌಂಟೇನ್ ಪೆನ್ ಡೇ ಪ್ರಯುಕ್ತ ಭಿನ್ನ-ವಿಭಿನ್ನ ಪೆನ್ನುಗಳ ಪ್ರದರ್ಶನ.

ಲೇಖನಿ ಅನ್ನುವುದು ಕತ್ತಿಗಿಂತಲೂ ಹರಿತ, ಈ ಮಾತನ್ನ ಹೇಳಿದವರು ಎಡ್ವರ್ಡ್ ಬುಲ್ವರ್ ಲಿಟ್ಟನ್ . ಈ ಮಾತು ನಿಜ ಕೂಡ. ಅಂದರೆ ತಮ್ಮ ತಮ್ಮ ಆಲೋಚನಾ ಶಕ್ತಿಗಳನ್ನ ಬರಹಗಳ ಮೂಲಕ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗಿರುವುದು ಪೆನ್‌ಗಳಿಂದಲೇ ಹಾಗಂತ ಪೆನ್‌ ಗಳ ಆವಿಷ್ಕಾರ ರಾತ್ರೋ ರಾತ್ರಿ ಆಗಿರುವಂತಹದ್ದಲ್ಲ. ಪೆ್ನ್‌ಗಳು ಕಚ್ಚಾ ವಸ್ತುವಿನಿಂದ ಹಿಡಿದು ಹಂತ ಹಂತವಾಗಿ ಪೆನ್‌ಗಳ ರೂಪ ಪಡೆದಿದೆ. ಅದರ ನೆನಪಿಗಾಗಿಯೇ ಫೌಂಟೇನ್‌ ಪೆನ್ ದಿನವನ್ನಾಗಿ ಆಚರಿಸಲಾಗುತ್ತೆ.

ಈ ಪೆನ್‌ಗಳಿಗಾಗಿಯೇ ಇರುವ ವಿಶೇಷ ದಿನದಂದು ಬಂಗಾಳದ ಮಾಲ್ಡಾ ಮೂಲದ ಗ್ರಂಥಪಾಲಕರಾದ ಸುಬೀರ್‌ಕುಮಾರ್‌ ಸಾಹಾ, ಇವರು ಸುಮಾರು 30 ವರ್ಷಗಳಿಂದ ಸಂಗ್ರಹಿಸಿರುವ ಭಿನ್ನ-ವಿಭಿನ್ನ ಬಗೆಯ ಪೆನ್‌ಗಳನ್ನ ಪ್ರದರ್ಶನಕ್ಕಿಟ್ಟಿದ್ದಾರೆ. 2012 ರಿಂದ ನವೆಂಬರ್ 4ರಂದು ಪೌಂಟೇನ್ ಪೆನ್ ಡೇ ಅಂದರೆ ಲೇಖನಿ ದಿನವನ್ನಾಗಿ ಆಚರಿಸಲಾಗುತ್ತೆ. ಈ ದಿನದ ಪ್ರಯುಕ್ತವೇ ಸಾಹಾ ಅವರು ಪೆನ್‌ಗಳನ್ನ‌ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಸಾಹಾ 1884ರಲ್ಲಿ ಬಳಸಲಾಗುತ್ತಿದ್ದ ಪೆನ್ನಿಂದ ಹಿಡಿದು ಇವತ್ತು ಅಧಿಕವಾಗಿ ಬಳಸಲಾಗುತ್ತಿರುವ ಪೆನ್‌ಗಳನ್ನು ಸಂಗ್ರಹಿಸಿದ್ದಾರೆ. ಇವರು ಪ್ರದರ್ಶನ ಇಟ್ಟಿರುವ ಪೆನ್‌ಗಳಲ್ಲಿ ಲೂಯಿಸ್ ಎಡ್ಸನ್ ವಾಟರ್ಮ್ಯಾ್ನ್ನಿಂದ ಶನೆಲ್ ಇಂಕ್ ಪೌಂಟೇನ್ ಪೆನ್ ವಿಶೇಷವಾಗಿದೆ. ಇದನ್ನು ಮಧ್ಯಕಾಲೀನ ಕಾಲದಲ್ಲಿ ಗುಹೆಗಳ ಗೋಡೆಗಳ ಮೇಲೆ ಬರೆಯಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇನ್ನೂ ಇವರ ಬಳಿ ಚಿನ್ನ, ಬೆಳ್ಳಿ, ತಾಮ್ರ, ಮರ, ಬಿದಿರು ಹಾಗೂ ಕಾಗದದಿಂದ ಮಾಡಿರುವ ಪೆನ್‌ಗಳು ಸಹ ಇವೆ.

ಈಗ ಸಾಹಾ ಅವರು ಮಾಡಿರುವ ಪೆನ್ ಸಂಗ್ರಹದಲ್ಲಿ ಏನಿಲ್ಲ ಅಂದರೂ ಒಂದು ಸಾವಿರ ಪೆನ್‌ಗಳಿವೆ. ಸಾಹಾ ಅವರಿಗೆ ಪೆನ್ ಸಂಗ್ರಹಿಸುವ ಹವ್ಯಾಸ ಕಾಲೇಜು ದಿನಗಳಿಂದಲೇ ಇತ್ತು. “ ಪೆನ್ ಮಾನವ ಜೀವನದ ಇತಿಹಾಸ ಬರೆದಿಡಲು ಸಹಾಯವಾಗಿದೆ. ಜನರಿಗೆ ಎಷ್ಟೋ ವಿಷಯಗಳು ನೆನಪಿನಲ್ಲಿ ಇರಿಸುವಂತೆ ಮಾಡುವುದೇ ಪೆನ್ನಿನಿಂದ ಬರೆದಿರುವಂತಹ ಬರವಣಿಗೆಗಳು. ಆದರೆ ಲೇಖನಿಗಳ ಹುಟ್ಟು, ಇತಿಹಾಸವೇ ಜನರಿಗೆ ಗೊತ್ತಿಲ್ಲ. ಇದೇ ಉದ್ದೇಶಕ್ಕಾಗಿ ಪೆನ್ನುಗಳ ಸಂಗ್ರಹ ಮಾಡುವ ಹವ್ಯಾಸವನ್ನ ರೂಢಿಸಿಕೊಂಡೆ ಎಂದು ಸಾಹಾ ಅವರು ಪೆನ್ ಸಂಗ್ರಹದ ಹಿಂದಿನ ಉದ್ದೇಶವನ್ನು ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ನಿಮ್ಮ ಪ್ರೀತಿ ಪಾತ್ರರಿಗೆ ಪೆನ್ಗಳನ್ನು ಉಡುಗೊರೆಯಾಗಿ ಕೊಡುವುದನ್ನೂ ಅಭ್ಯಾಸ ಮಾಡಿಕೊಳ್ಳಿ,‘ ಇದು ಬರವಣಿಗೆ ಪರಂಪರೆ ಜೀವಂತವಾಗಿ ಇಡುವಲ್ಲಿ ಸಹಾಯಕವಾಗಿದೆ‘ ಎಂದು ಸಲಹೆ ಕೊಡುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...