ಕಾರ್ತೀಕ ಮಾಸದ ಅಮವಾಸ್ಯೆಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ನವೆಂಬರ್ 4 ಗುರುವಾರ ಅಮವಾಸ್ಯೆ ಬಂದಿದೆ. ದೀಪಾವಳಿಗೆ ಈಗಿನಿಂದಲೇ ತಯಾರಿ ಜೋರಾಗಿ ನಡೆದಿದೆ. ದೀಪಗಳ ಹಬ್ಬ ದೀಪಾವಳಿ ಆಚರಿಸಲು ಜನರು ಸಿದ್ಧರಾಗಿದ್ದಾರೆ.
ದೀಪಾವಳಿಯ ಅಮವಾಸ್ಯೆಯಂದು ಎಲ್ಲೆಡೆ ಲಕ್ಷ್ಮಿ ಪೂಜೆ ಅದ್ದೂರಿಯಾಗಿ ನಡೆಯುತ್ತದೆ. ಲಕ್ಷ್ಮಿಯ ಜೊತೆ ಗಣೇಶ ಮತ್ತು ಸರಸ್ವತಿಯ ಪೂಜೆ ಕೂಡ ನಡೆಯುತ್ತದೆ.
ಧೋನಿ ಅಭಿಮಾನಿಗಳಿಗೆ ಬಿಗ್ ನ್ಯೂಸ್….! ಐಪಿಎಲ್ ಮೆಗಾ ಹರಾಜಿಗೂ ಮುನ್ನ ಶ್ರೀನಿವಾಸನ್ ಶಾಕಿಂಗ್ ಹೇಳಿಕೆ
ದೀಪಾವಳಿ ದಿನ ಎಣ್ಣೆ ಸ್ನಾನ ಮಹತ್ವ ಪಡೆದಿದೆ. ದೀಪಾವಳಿಯ ದಿನ ಸಾಸಿವೆ ಮತ್ತು ಕುಂಕುಮದ ಎಣ್ಣೆಯನ್ನು ಬಳಸುವುದರಿಂದ ಮನೆಯ ಅನೇಕ ಕಷ್ಟಗಳು ದೂರವಾಗುತ್ತವೆ. ವಾಸ್ತು ದೋಷಗಳು ನಿವಾರಣೆಯಾಗುತ್ತದೆ.
ದೀಪಾವಳಿಯಂದು ಸಾಸಿವೆ ಎಣ್ಣೆ ಮತ್ತು ಕುಂಕುಮವನ್ನು ಬೆರೆಸಿ ಮನೆಯ ಹೊರಗಡೆ ಗೇಟ್ ಗೆ ಸ್ವಸ್ತಿಕ ಬಿಡಿಸಬೇಕು. ಇದರಿಂದ ಮನೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ನಂಬಲಾಗಿದೆ. ಸಾಸಿವೆ ಮತ್ತು ಕುಂಕುಮದ ಎಣ್ಣೆಯು ಮನೆಯ ಸದಸ್ಯರ ಏಳ್ಗೆಗೆ ಕಾರಣವಾಗುತ್ತದೆ. ಶನಿದೇವನ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ಮತ್ತು ಸಾಡೆ ಸಾತ್ ದೋಷವಿರುವವರು ಕೂಡ ಈ ಎಣ್ಣೆಯನ್ನು ಅವಶ್ಯಕವಾಗಿ ಉಪಯೋಗಿಸಬೇಕು.