ನವದೆಹಲಿ: ಪ್ಲಾಟ್‌ಫಾರಂನಲ್ಲಿದ್ದ ಪೊಲೀಸರೊಬ್ಬರು ಸೆಳವಿಗೆ ತುತ್ತಾಗಿ, ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವ ಪೂರ್ವದಲ್ಲೇ ಅಸುನೀಗಿದ ಘಟನೆ ಆಗ್ರಾ ರೈಲ್ವೇ ನಿಲ್ದಾಣದಲ್ಲಿ ವರದಿಯಾಗಿದೆ.
ಪೊಲೀಸ್ ಪೇದೆಯು ಸೆಳವಿನಿಂದ ಸಮತೋಲನ ಕಳೆದುಕೊಂಡು ರೈಲಿನಡಿಗೆ ಬೀಳುತ್ತಿರುವ ದೃಶ್ಯವು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಪೇದೆಯನ್ನು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ರೆಗಲ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಬಹುತೇಕ ಖಾಲಿಯಾಗಿದ್ದ ಪ್ಲಾಟ್‌ಫಾರಂನಲ್ಲಿ ರೆಗಲ್ ಸಿಂಗ್ ನಿಂತುಕೊಂಡಿದ್ದರು. ಆರಾಮವಾಗಿಯೇ ಇದ್ದರು. ಅವರ ಹಿಂಭಾಗದಲ್ಲಿ ಗೂಡ್ಸ್ ರೈಲೊಂದು ಚಲಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಈ ವೇಳೆ ಇದ್ದಕ್ಕಿದ್ದಂತೆ ಸುತ್ತಲು ಶುರು ಮಾಡಿದ ಅವರು ದೇಹದ ಸಮತೋಲನ ಕಳೆದುಕೊಂಡು ಬಿದ್ದಿದ್ದಾರೆ. ಈ ರೀತಿಯ ಪರಿಭ್ರಾಮಕ ಸೆಳವು ತುಂಬ ವಿರಳವೆಂದು ವೈದ್ಯರು ತಿಳಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಮತ್ತೊಂದು ಟ್ವಿಸ್ಟ್; ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದನಾ ಅಭ್ಯರ್ಥಿ….?
ರೈಲು ಟಿಕೆಟ್ ಪರೀಕ್ಷಕರು ಓಡೋಡುತ್ತ ಬಂದು ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಕುಟುಂಬಕ್ಕೆ ಆಘಾತವಾಗಿದೆ. ರೆಗಲ್ ಸಿಂಗ್ ಆರೋಗ್ಯವಾಗಿಯೇ ಇದ್ದರು. ಅವರಿಗೆ ಸೆಳವಿನಂತಹ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.