alex Certify Video: ಲಂಚದ ಹಣ ಹಂಚಿಕೊಳ್ಳುವಾಗಲೇ ಸಿಕ್ಕಿಬಿದ್ರು ಮೂವರು ಪೊಲೀಸ್; ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ‘ದೃಶ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ಲಂಚದ ಹಣ ಹಂಚಿಕೊಳ್ಳುವಾಗಲೇ ಸಿಕ್ಕಿಬಿದ್ರು ಮೂವರು ಪೊಲೀಸ್; ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ‘ದೃಶ್ಯ’

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲಂಚಾವತಾರದ ಬಗ್ಗೆ ಆಗಾಗ ಸುದ್ದಿ ಹಾಗೂ ವಿಡಿಯೋಗಳು ಹರಿದಾಡುತ್ತಿರುತ್ತವೆ. ಈ ಸಾಲಿಗೆ ಈಗ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಆದರೆ ಈ ಪ್ರಕರಣದಲ್ಲಿ ಲಂಚ ಪಡೆದ ಮೂವರು ಪೊಲೀಸರು ಸಸ್ಪೆಂಡ್ ಆಗಿದ್ದಾರೆ.

ಈ ಘಟನೆ ಶನಿವಾರದಂದು ದೆಹಲಿಯ ಗಾಜಿಪುರದಲ್ಲಿನ ತ್ರಿಲ್ ಲವ್ರಿ ಸರ್ಕಲ್ ಬಳಿ ಇರುವ ಪೊಲೀಸ್ ಚೌಕಿಯಲ್ಲಿ ನಡೆದಿದ್ದು, ತಾವುಗಳು ಸಿಸಿ ಟಿವಿ ಪರಿವೀಕ್ಷಣೆಯಲ್ಲಿ ಇದ್ದೇವೆ ಎಂಬುದರ ಅರಿವೇ ಇಲ್ಲದಂತೆ ಈ ಪೊಲೀಸರು ವ್ಯಕ್ತಿಯೊಬ್ಬನಿಂದ ಲಂಚ ಪಡೆದಿದ್ದಲ್ಲದೆ ಅದನ್ನು ಬಳಿಕ ಸಮನಾಗಿ ಹಂಚಿಕೊಂಡಿದ್ದಾರೆ. ಲಂಚ ಪಡೆಯುವ ಮುನ್ನ ಓರ್ವ ಪೊಲೀಸ್, ಆ ವ್ಯಕ್ತಿಯ ಬಳಿ ಚೌಕಾಸಿ ಕೂಡ ನಡೆಸಿದ್ದಾನೆ.

ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಂಡುಬರುವಂತೆ ಓರ್ವ ಪೊಲೀಸ್, ಚೌಕಿಗೆ ಬಂದ ವ್ಯಕ್ತಿ ಬಳಿ ಮಾತಿನಲ್ಲಿ ತೊಡಗುತ್ತಾನೆ. ಬಹುಶಃ ಅವರಿಬ್ಬರ ಮಧ್ಯೆ ಹಣದ ವ್ಯವಹಾರ ಕುರಿತಂತೆ ಚರ್ಚೆ ನಡೆದಂತೆ ಕಾಣಿಸುತ್ತದೆ. ಬಳಿಕ ಆ ವ್ಯಕ್ತಿ ಹಣದ ಕಂತೆ ಇರುವ ಬಂಡಲ್ ಅನ್ನು ಟೇಬಲ್ ಮೇಲೆ ಇಟ್ಟಿದ್ದು, ಅಲ್ಲಿಂದ ತೆರಳುತ್ತಾನೆ. ಇದನ್ನು ತೆಗೆದುಕೊಂಡ ಪೊಲೀಸ್ ಕೌಂಟ್ ಮಾಡಿ ಬಳಿಕ ಅಲ್ಲಿದ್ದ ಇತರೆ ಇಬ್ಬರಿಗೂ ಹಂಚುತ್ತಾನೆ. ಈ ಸಂದರ್ಭದಲ್ಲಿ ಎಲ್ಲರ ಮುಖದಲ್ಲೂ ಮಂದಹಾಸವಿರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಗಮನಕ್ಕೂ ಬಂದಿದ್ದು, ಇದೀಗ ಇಬ್ಬರು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಈ ಕುರಿತಂತೆ ಇಲಾಖಾ ತನಿಖೆ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಲೆಫ್ಟಿನೆಂಟ್ ಗವರ್ನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

— Kunal Kashyap (@kunalkashyap_st) August 17, 2024

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...