alex Certify ಪರಿಹಾರ ಕೋರಿದ ಮಹಿಳೆಗೆ ಕಪಾಳಮೋಕ್ಷ; ವಿಡಿಯೋ ವೈರಲ್ ಆಗ್ತಿದ್ದಂತೆ ಲೇಡಿ ಆಫೀಸರ್ ʼಸಸ್ಪೆಂಡ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಹಾರ ಕೋರಿದ ಮಹಿಳೆಗೆ ಕಪಾಳಮೋಕ್ಷ; ವಿಡಿಯೋ ವೈರಲ್ ಆಗ್ತಿದ್ದಂತೆ ಲೇಡಿ ಆಫೀಸರ್ ʼಸಸ್ಪೆಂಡ್ʼ

ಸಮರ್ಪಕವಾಗಿ ಪರಿಹಾರ ನೀಡುವಂತೆ ಪ್ರವಾಹ ಸಂತ್ರಸ್ತೆ ಕೇಳಿದ್ದಕ್ಕೆ ಗ್ರಾಮದ ಅಧಿಕಾರಿ, ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಅಜಿತ್ ಸಿಂಗ್ ನಗರದ ಪ್ರವಾಹ ಪೀಡಿತ ಪ್ರದೇಶದ 259 ನೇ ವಾರ್ಡ್‌ನ ಗ್ರಾಮ ಕಂದಾಯ ಅಧಿಕಾರಿ (ವಿಆರ್‌ಒ) ಯನ್ನು ಅಸಮರ್ಪಕ ಕುಡಿಯುವ ನೀರು ಮತ್ತು ಆಹಾರ ಪೂರೈಕೆಯ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ಮುಂದೆ ಪ್ರವಾಹ ಸಂತ್ರಸ್ತ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದರು. ಈ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.

ಎನ್‌ಟಿಆರ್ ಜಿಲ್ಲಾಧಿಕಾರಿ ಸೃಜನ ಅವರು ಅಧಿಕಾರಿ ಜಯಲಕ್ಷ್ಮಿ ವಿರುದ್ಧ ತ್ವರಿತ ಕ್ರಮ ಕೈಗೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ವಿತರಿಸಲಾಗುತ್ತಿರುವ ಆಹಾರ ಮತ್ತು ಕುಡಿಯುವ ನೀರಿನ ನಿಬಂಧನೆಗಳ ಬಗ್ಗೆ ಪ್ರವಾಹ ಸಂತ್ರಸ್ತರಾದ ಯಾಸಿನ್ ಅವರು ಅಧಿಕಾರಿ ಜಯಲಕ್ಷ್ಮಿಯನ್ನು ಪ್ರಶ್ನಿಸಿದಾಗ ಈ ಪ್ರಸಂಗ ನಡೆಯಿತು. ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿದ್ದ ಸ್ಥಳದಲ್ಲೇ ಆಕ್ರಮಣಕಾರಿ ರೀತಿಯಲ್ಲಿ ಮಹಿಳಾ ಅಧಿಕಾರಿ ಸಂತ್ರಸ್ತೆಗೆ ಕಪಾಳಮೋಕ್ಷ ಮಾಡಿದರು.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರವಾಗಿ ವೈರಲ್ ಆಗಿ ಅಧಿಕಾರಿ ವಿರುದ್ಧ ಸಾರ್ವಜನಿಕ ಟೀಕೆಗಳು ಜೋರಾದವು. ಯಾವುದೇ ಉನ್ನತ ಅಧಿಕಾರಿಯಾಗಿರಲಿ ಅವರಿಗೆ ಕೈ ಮಾಡುವ ಅಧಿಕಾರವಿಲ್ಲ, ಆಕೆಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಅಧಿಕಾರಿಗಳ ತಂಡ ಮನೆಯೊಂದಕ್ಕೆ ಕೇವಲ ಎರಡು ಬಾಟಲಿ ನೀರು ನೀಡುತ್ತಿತ್ತು. ನಿರಂತರ ಪ್ರವಾಹದಿಂದ ನೀಡಿದ್ದ ಆಹಾರ ಪದಾರ್ಥಗಳು ತಿನ್ನಲಾಗದಂತೆ ಹಾಳಾಗುತ್ತಿದ್ದವು. ಅಗತ್ಯ ವಸ್ತುಗಳ ವಿತರಣೆಯ ಬಗ್ಗೆ ಸ್ಪಷ್ಟನೆ ಕೇಳುತ್ತಿದ್ದಾಗ ಮಹಿಳಾ ಅಧಿಕಾರಿ ಯಾಸಿನ್ ಮೇಲೆ ಹಲ್ಲೆ ಮಾಡಿ ನಿಂದಿಸಿದರು ಎಂದು ಆರೋಪಿಸಲಾಗಿದೆ.

— Ghar Ke Kalesh (@gharkekalesh) September 10, 2024

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...