
ಮೆಡಿಕಲ್ ಶಾಪ್‌ನಲ್ಲಿ ಪುರುಷರು ಮತ್ತು ಮಹಿಳಾ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಇಬ್ಬರ ಕಿತ್ತಾಟದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
100 ರೂಪಾಯಿಯ ವಿಚಾರಕ್ಕೆ ಉತ್ತರ ಪ್ರದೇಶದ ಬಂದಾ ಎಂಬಲ್ಲಿನ ಮೆಡಿಕಲ್ ಸ್ಟೋರ್‌ನಲ್ಲಿ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ವೀಡಿಯೊದಲ್ಲಿ, ಮಹಿಳೆಯರು ಪರಸ್ಪರ ಕೂದಲನ್ನು ಎಳೆಯುವುದು, ಕಪಾಳಮೋಕ್ಷ ಮಾಡುವುದು ಸೆರೆಯಾಗಿದೆ. ಒಬ್ಬ ಮಹಿಳೆ ಡಿಐಜಿಯನ್ನು ಕರೆಸ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. .
ಈ ಗಲಾಟೆಯ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ಈ ದೃಶ್ಯಗಳು ಉತ್ತರಪ್ರದೇಶ ಪೊಲೀಸರ ಗಮನ ಸೆಳೆಯಿತು. “100 ರೂಪಾಯಿ ಸಾಲದ ಬಗ್ಗೆ ಎರಡು ಪಕ್ಷಗಳ ನಡುವೆ ಸಣ್ಣ ವಿವಾದ ಸಂಭವಿಸಿದೆ.ಎರಡೂ ಗುಂಪುಗಳ ನಡುವಿನ ವಿವಾದವನ್ನು ಪರಿಹರಿಸಿಕೊಳ್ಳಲಾಗಿದೆ. ಈ ಬಗ್ಗೆ ತಾವು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದಂತೆ ವಿನಂತಿಸಲಾಗಿದೆ ಎಂದು ತಿಳಿಸುವ ಅರ್ಜಿಯನ್ನು ಮಹಿಳೆ ಸಲ್ಲಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಕೇವಲ 100 ರೂಪಾಯಿಗೆ ಡಿಐಜಿಯನ್ನು ಕರೆಯುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು, “ಉನ್ನತ ಮಟ್ಟದಲ್ಲಿ ಮಹಿಳಾ ಸಬಲೀಕರಣ” ಎಂದು ವ್ಯಂಗ್ಯವಾಡಿದರು.