ಲಖನೌ: ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯನ್ನು ಶಾಪಿಂಗ್ ಮಾಲ್ಗೆ ಕರೆದೊಯ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಮೂವರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ.
ಘಟನೆಯ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಮಾರ್ಚ್ 7 ರಂದು ನಡೆದಿದೆ.
ಪೊಲೀಸರು ಕೈದಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯಿದ್ದರು ಮತ್ತು ಹಿಂದಿರುಗುವಾಗ ಅವರು ಶಾಪಿಂಗ್ ಮಾಲ್ಗೆ ಹೋಗಿದ್ದಾರೆ.
ಅಮಾನತುಗೊಂಡ ಪೊಲೀಸರಲ್ಲಿ ಎಸ್ಐ ರಾಮಸೇವಕ್ ಮತ್ತು ಕಾನ್ಸ್ಟೆಬಲ್ಗಳಾದ ಅನುಜ್ ಧಾಮ, ನಿತಿನ್ ರಾಣಾ ಮತ್ತು ರಾಮಚಂದ್ರ ಪ್ರಜಾಪತಿ ಸೇರಿದ್ದಾರೆ. ಕರ್ತವ್ಯ ಲೋಪಕ್ಕಾಗಿ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಲಖನೌ ಪೊಲೀಸ್ ಕಮಿಷನರೇಟ್ ತಿಳಿಸಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿಯನ್ನು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಬಂಧಿಸಿ ಜೂನ್ 2022 ರಲ್ಲಿ ಜೈಲಿಗೆ ಕಳುಹಿಸಲಾಗಿತ್ತು.
ಅವರು ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು ಮತ್ತು ನ್ಯಾಯಾಲಯವು ಹೇಳಿದ ದಿನಾಂಕದಂದು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲು ಅವಕಾಶ ನೀಡಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಅಧಿಕಾರಿಗಳು ಕೈದಿಯನ್ನು ಆಸ್ಪತ್ರೆಗೆ ಕರೆದೊಯ್ದು ನಂತರ ಜೈಲಿಗೆ ಕರೆತರಬೇಕಿತ್ತು. ಮಾಲ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ.